50 WORDS NEWS | ತೀರ್ಥಹಳ್ಳಿ ಇತಿಹಾಸ ಪ್ರಸಿದ್ಧ ದೇಗುಲದಲ್ಲಿ ಗಲಾಟೆ | ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 12 ಅಕ್ಟೋಬರ್ 2018

ಇತಿಹಾಸ ಪ್ರಸಿದ್ಧ ದೇವಸ್ಥಾನದಲ್ಲಿ ಗಲಾಟೆ

ಇತಿಹಾಸ ಪ್ರಸಿದ್ಧ ಮೃಗವಧೆ ದೇವಸ್ಥಾನದಲ್ಲಿ ಗಲಾಟೆ ನಡೆದು ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನ್ನದಾನ ಸಮಿತಿ ಪುನರ್ ರಚನೆ ವಿಚಾರದಲ್ಲಿ ಜಗಳವಾಗಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಮಿತಿ ಪುನಾರಚನೆ ಬೇಡ ಅಂತಾ ಒಂದು ಗುಂಪು ಒತ್ತಾಯಿಸಿದೆ. ಮತ್ತೊಂದು ಗುಂಪು ನೀತಿ ಸಂಹಿತೆಗೂ ಸಮಿತಿ ಪುನಾರಚನೆಗೂ ಸಂಬಂಧವಿಲ್ಲ ಅಂತಾ ವಾದಿಸಿದೆ. ಇದರಿಂದ ಗಲಾಟೆಯಾಗಿ, ಕರುಣಾಕರ್ ಮತ್ತು ಸತೀಶ್ ಎಂಬುವವರು ಗಾಯಗೊಂಡಿದ್ದಾರೆ.

ಹೇಳೇ ದ್ವೇಷದಿಂದ ಹಲ್ಲೆ

ಹಳೇ ವೈಷಮ್ಯದ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ಇಬ್ಬರು ಜಗಳವಾಡಿಕೊಂಡಿದ್ದು, ಒಬ್ಬನಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಂಜದಕಟ್ಟೆಯಲ್ಲಿ ಘಟನೆ ನಡೆದಿದೆ. ಅಸ್ಗರ್ ಅಲಿ ಗಾಯಗೊಂಡವರು. ಹಳೇ ದ್ವೇಷದ ಹಿನ್ನೆಲೆ ರಹೀಂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಅಂತಾ ಅಸ್ಗರ್ ಆರೋಪಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!