ತೀರ್ಥಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಜ್ವರ, ಇಡೀ ಶಾಲೆಗೆ ರಜೆ, ಇನ್ನೂ ತಗ್ಗದ ಜನರ ಆತಂಕ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 27 ಸೆಪ್ಟೆಂಬರ್ 2018

ಹೆಚ್1ಎನ್1 ಸಾಂಕ್ರಾಮಿಕ ಜ್ವರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. ಇನ್ನು, ವಿದ್ಯಾರ್ಥಿಯೊಬ್ಬನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆ, ಶಾಲೆಗೆ ರಜೆ ಘೋಷಿಸಲಾಗಿದೆ.

ಜೆಸಿ ಆಸ್ಪತ್ರೆ ಡಿಸಿ ವಿಸಿಟ್

ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಯಾನಂದ್ ಅವರು ಭೇಟಿ ನೀಡಿ, ಹೆಚ್1ಎನ್1 ಸಾಂಕ್ರಾಮಿಕ ಜ್ವರ ಪೀಡಿತರ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭ ಶಾಸಕ ಆರಗ ಜ್ಞಾನೇಂದ್ರ ಅವರು ಆಸ್ಪತ್ರೆಗೆ ವಿಸಿಟ್ ಮಾಡಿದ್ದರು. ಬಳಿಕ ನಡೆದ ಸಭೆಯಲ್ಲಿ, ಹೆಚ್1ಎನ್1 ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.

ಜೆಸಿ ಆಸ್ಪತ್ರೆಯಲ್ಲಿ ಹೆಚ್1ಎನ್1 ಸಾಂಕ್ರಾಮಿಕ ಜ್ವರ ನಿಯಂತ್ರಣಕ್ಕೆ ವಿಶೇಷ ಘಟಕ ಆರಂಭಿಸಲಾಗಿದೆ. ಆದರೆ ಅದರ ನಿರ್ವಹಣೆಗೆ ಸ್ಟಾಫ್ ನರ್ಸ್, ವೈದ್ಯರ ಕೊರತೆ ಇದೆ ಎಂದು ತಿಳಿಸಲಾಯಿತು. ಕೂಡಲೇ ವೈದ್ಯರು ಮತ್ತು ಸಹಾಯಕರನ್ನು ನಿಯೋಜಿಸಲಾಗುತ್ತದೆ ಅಂತಾ ಜಿಲ್ಲಾಧಿಕಾರಿ ತಿಳಿಸಿದರು.

ವಿದ್ಯಾರ್ಥಿಗೆ ಜ್ವರ, ಇಡೀ ಸ್ಕೂಲ್’ಗೆ ರಜೆ

ಇನ್ನು, ಕನ್ನಂಗಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬನಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಇಡೀ ಶಾಲೆಗೆ ಬುಧವಾರ ರಜೆ ಘೋಷಿಸಲಾಗಿತ್ತು. ಮುಂದಿನ ನಿರ್ಧಾರದವರೆಗೂ ಶಾಲೆ ರಜೆ ಇರಲಿದೆ. ಹೆಚ್1ಎನ್1 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತಡೆಯಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!