ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ರೇಡ್, ನಾಲ್ವರು ಎಸ್ಕೇಪ್, ಎಷ್ಟು ಮರಳು ಸೀಸ್ ಆಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 03 ಅಕ್ಟೋಬರ್ 2018

ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, 13 ಟ್ರ್ಯಾಕ್ಟರ್ ಲೋಡ್’ನಷ್ಟು ಮರಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಾಲ್ವರು ಪರಾರಿಯಾಗಿದ್ದು, ಅವರ ಗುರುತು ಪತ್ತೆಯಾಗಿದೆ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. (File Photo)

ದೇವಂಗಿ ಹಳ್ಳದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ, ದೇವಂಗಿಯ ಜ್ಯೋತಿಸರದ ನಾಗೇಶ್, ಬಳಗಟ್ಟೆಯ ಮಧುಸೂದನ್, ಇಂದಿರಾನಗರದ ಚನ್ನಪ್ಪ ಮತ್ತು ಉಂಟೂರಿನ ನಾಗೇಂದ್ರಗೌಡ ಪರಾರಿಯಾಗಿದ್ದಾರೆ ಎಂದು ಗುರುತಿಸಲಾಗಿದೆ.

ದಾಳಿ ವೇಳೆ ಅಕ್ರಮವಾಗಿ ಸಗಣೆ ಮಾಡಲು 5 ಕಡೆ ಮರಳು ರಾಶಿ ಮಾಡಿರುವುದು ಬೆಳಕಿಗೆ ಬಂದಿದೆ. ಸುಮಾರು 50 ಸಾವಿರ ರೂ. ಮೌಲ್ಯದ ಮರಳು ವಶಕ್ಕೆ ಪಡೆಯಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!