ಹಣಗೆರೆ ಕಟ್ಟೆಗೆ ಶಾಸಕ, ಡಿಸಿ ಭೇಟಿ, ಸ್ವಚ್ಛತೆಯ ಪರಿಶೀಲನೆ, ಏನೇನು ಸಮಸ್ಯೆಗಳಿವೆ, ಏನೆಲ್ಲ ಕ್ರಮ ಕೈಗೊಳ್ಳಲಿದ್ದಾರೆ?

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 02 ಅಕ್ಟೋಬರ್ 2018

ಸೌಹಾರ್ದ ಧಾರ್ಮಿಕ ಕೇಂದ್ರ ಹಣಗೆರೆ ಕಟ್ಟೆಯಲ್ಲಿನ ಸ್ವಚ್ಛತೆ ಕುರಿತು ಶಾಸಕರು ಮತ್ತು ಜಿಲ್ಲಾಧಿಕಾರಿ ಜಂಟಿಯಾಗಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಹೆಚ್1ಎನ್1 ಸಾಂಕ್ರಾಮಿಕ ಜ್ವರ ಕಾಣಿಸಿಕೊಂಡಿರುವ ಕನ್ನಂಗಿಗೆ ತೆರಳಿ ಪರಿಶೀಲಿಸಿದರು.

ಹಣಗೆರೆ ಕಟ್ಟೆ ಸ್ವಚ್ಛತೆಗೆ ಆದ್ಯತೆ

ಹಣಗೆರೆ ಕಟ್ಟೆಗೆ ಶಾಸಕ ಅರಗ ಜ್ಞಾನೇಂದ್ರ ಮತ್ತು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಭೇಟಿ ನೀಡಿದ್ದರು. ಧಾರ್ಮಿಕ ಕೇಂದ್ರದಲ್ಲಿ ಸ್ವಚ್ಛತೆ ಕುರಿತು ಪರಿಶೀಲಿಸಿದರು. ಈ ವೇಳೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.

ಹಣಗೆರೆ ಕಟ್ಟೆಗೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗ ಸ್ವಚ್ಛತೆ ಕಾಪಾಡುವುದು ಕಷ್ಟಕರವಾಗಿದೆ. ಇನ್ನು, ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ, ಪಾರ್ಕಿಂಗ್ ಸಮಸ್ಯೆ ಉಲ್ಬಣಿಸಿದೆ. ಮತ್ತೊಂದೆಡೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ, ಭಕ್ತರಿಗೆ ಸೌಕರ್ಯ ಒದಗಿಸಲು ಕಾನೂನು ಅಡ್ಡಿಯಾಗುತ್ತಿದೆ ಅಂತಾ ಸ್ಥಳೀಯರು ಆರೋಪಿಸಿದರು. ಹಣಗೆರೆ ಕಟ್ಟೆಯಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.

ಕನ್ನಂಗಿ ಆಸ್ಪತ್ರೆ ಭೇಟಿ, ಪರಿಶೀಲನೆ

ಹೆಚ್1ಎನ್1 ಸಾಂಕ್ರಾಮಿಕ ಜ್ವರಕ್ಕೆ ತುತ್ತಾಗಿರುವ ಕನ್ನಂಗಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾಧಿಕಾರಿ ದಯಾನಂದ್, ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು. ಸಮುದಾಯ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!