ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಉಪವಾಸಕ್ಕೆ ಭಾರೀ ಬೆಂಬಲ, ಶಾಸಕ, ಮಾಜಿ ಶಾಸಕರಿಂದ ಸಾಥ್

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 02 ಅಕ್ಟೋಬರ್ 2018

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉಪವಾಸ ಆರಂಭಿಸಿದ್ದಾರೆ. ಬೆಳಗ್ಗೆಯಿಂದ ನಿರಂತರವಾಗಿ ಉಪವಾಸ ನಡೆಯುತ್ತಿದ್ದು, ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಿಮ್ಮನೆ ರತ್ನಾಕರ್ ಅವರ ಉಪವಾಸಕ್ಕೆ ವೈ.ಎಸ್.ವಿ ದತ್ತಾ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಪ್ರಮುಖರಾದ ಸುಧೀರ್ ಕುಮಾರ್, ನವೀನ್ ಕರುವಾನೆ, ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ, ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪವಾಸ ಸ್ಥಳಕ್ಕೆ ಭೇಟಿ ನೀಡಿ, ಕಿಮ್ಮನೆ ರತ್ನಾಕರ್ ಅವರೊಂದಿಗೆ ಕುಳಿತು ಬೆಂಬಲ ಸೂಚಿಸಿದ್ದಾರೆ.

ನಾಳೆ ಬೆಳಗ್ಗೆ 9 ಗಂಟೆವರೆಗೂ ಕಿಮ್ಮನೆ ರತ್ನಾಕರ್ ಉಪವಾಸ ಮಾಡಲಿದ್ದಾರೆ. ಈವರೆಗೂ ಹಲವು ಕಾಂಗ್ರೆಸ್ ನಾಯಕರು ಕಿಮ್ಮನೆ ಅವರಿಗೆ ಬೆಂಬಲವಾಗಿ ಉಪವಾಸ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!