ತೀರ್ಥಹಳ್ಳಿ, ಹೊಸನಗರದಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ, ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಮಳೆಯಾಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ / ಹೊಸನಗರ

ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲ, ಗದ್ದೆ, ತೋಟಗಳು ಮುಳುಗಡೆಯಾಗಿವೆ. ಧಾರಾಕಾರ ಮಳೆಯ ಹಿನ್ನೆಲೆ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಮಳೆಯಾಗಿದೆ?

ತೀರ್ಥಹಳ್ಳಿ ತಾಲೂಕಿನಲ್ಲಿ ನಿಲ್ಲದ ಮಳೆ ಆರ್ಭಟ

ಹೆದ್ದೂರು 126 ಮಿ.ಮೀ, ಶೇಡಗಾರು 133 ಮಿ.ಮೀ, ತ್ರಯಾಂಬಕಪುರ 126 ಮಿ.ಮೀ, ನೇರತೂರು 131 ಮಿ.ಮೀ, ಸಿಂಗನಬಿದರೆ 66 ಮಿ.ಮೀ, ಮೇಲಿನಕುರುವಳ್ಳಿ 124 ಮಿ.ಮೀ, ದೇಮ್ಲಾಪುರ 126 ಮಿ.ಮೀ, ನೊಣಬೂರು 133 ಮಿ.ಮೀ, ಹಾದಿಗಲ್ಲು 125 ಮಿ.ಮೀ, ಹೆದ್ದೂರು 81 ಮಿ.ಮೀ, ಕುಡುಮಲ್ಲಿಗೆ 66 ಮಿ.ಮೀ, ಭಾಂಡ್ಯ ಕುಕ್ಕೆ 65 ಮಿ.ಮೀ, ಅರಳ ಸುರಳಿ 126 ಮಿ.ಮೀ, ಅಗ್ರಹಾರ 126 ಮಿ.ಮೀ, ಹುಂಚದಕಟ್ಟೆ 126 ಮಿ.ಮೀ, ಹೊಸಹಳ್ಳಿ 125 ಮಿ.ಮೀ, ಮಾಳೂರು 64 ಮಿ.ಮೀ, ಆರಗ 77 ಮಿ.ಮೀ, ಬೆಜ್ಜವಳ್ಳಿ 66 ಮಿ.ಮೀ, ಹೊಸಹಳ್ಳಿ 122 ಮಿ.ಮೀ, ನೇರತ್ತೂರು 73 ಮಿ.ಮೀ, ಹೆಗ್ಗೋಡು 149 ಮಿ.ಮೀ, ಮೇಲಿನಕುರುವಳ್ಳಿ 87 ಮಿ.ಮೀ ಮಳೆ ದಾಖಲಾಗಿದೆ.

ಹೊಸನಗರ ತಾಲೂಕಿನಲ್ಲೂ ವಿಪರೀತ ಮಳೆ

ಮತ್ತೆಮನೆ 234 ಮಿ.ಮೀ, ಕೋಡೂರು 124 ಮಿ.ಮೀ, ಹೊಸೂರು (ಸಂಪೆಕಟ್ಟೆ) 206 ಮಿ.ಮೀ, ಬಾಳೂರು 64 ಮಿ.ಮೀ, ಕೆರೆಹಳ್ಳಿ 64 ಮಿ.ಮೀ, ತ್ರಿಣಿವೆ 126 ಮಿ.ಮೀ, ಸುಳಗೋಡು 230 ಮಿ.ಮೀ, ಅಮೃತ 131 ಮಿ.ಮೀ, ಬೆಳ್ಳೂರು 68 ಮಿ.ಮೀ, ನಗರ 124 ಮಿ.ಮೀ, ರಾಮಚಂದ್ರಾಪುರ 124 ಮಿ.ಮೀ, ಸೊನಾಲೆ 126 ಮಿ.ಮೀ, ಹುಂಚ 124 ಮಿ.ಮೀ ಮಳೆಯಾಗಿದೆ.

ಎರಡೂ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಇವತ್ತು ಕೂಡ ಮಳೆ ಮುಂದುವರೆದಿದೆ. ಹಾಗಾಗಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚುವ ಸಂಭವವಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!