ತೀರ್ಥಹಳ್ಳಿ ಕಾಲೇಜಿನಲ್ಲಿ ಯುವಕರ ಪುಂಡಾಟ, ವಿದ್ಯಾರ್ಥಿಗೆ ಗಂಭೀರ ಗಾಯ, ತಲೆಗೆ ಹೊಲಿಗೆ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 12 ಅಕ್ಟೋಬರ್ 2018

ಕಾಲೇಜಿನಲ್ಲಿ ಪುಂಡರ ಗಲಾಟೆಗೆ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು, ಅಸ್ಪತ್ರೆ ಸೇರಿದ್ದಾನೆ. ಪರೀಕ್ಷೆ ಮುಗಿಸಿಕೊಂಡು ಹೊರಬಂದು ನಿಂತಿದ್ದ ವಿದ್ಯಾರ್ಥಿ ಮೇಲೆ ದಾಳಿ ಮಾಡಲಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನೋಜ್ ತಲೆಗೆ ಗಾಯವಾಗಿದೆ. ಕಲ್ಲಿನ ಏಟು ಬಿದ್ದಿದ್ದರಿಂದ ಹೊಲಿಗೆ ಹಾಕಲಾಗಿದೆ. ಸಮಾಜಶಾಸ್ತ್ರ ಪರೀಕ್ಷೆ ಬರೆದು ಹೊರಬಂದು ನಿಂತಿದ್ದ ಮನೋಜ್ ಮೇಲೆ, ಹುಡುಗರ ಗುಂಪೊಂದು ದಾಳಿ ಮಾಡಿದೆ. ದಿಢೀರ್ ಕಲ್ಲು ತೂರಿದ್ದು, ಮನೋಜ್ ತಲೆಗೆ ಗಾಯವಾಗಿದೆ.

ಕಾಲೇಜಿನೊಳಗೆ ಬಂದ ಹುಡುಗರ ಗುಂಪಿನಲ್ಲಿ ಅದೇ ಕಾಲೇಜಿನ ಒಂದಿಬ್ಬರು ವಿದ್ಯಾರ್ಥಿಗಳಿದ್ದರು ಅಂತಾ ಹೇಳಲಾಗುತ್ತಿದೆ. ಈ ಗುಂಪು ಮಾರಕ ಆಯುಧಗಳನ್ನು ಹೊಂದಿತ್ತು ಅಂತಲೂ ಹೇಳಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಮನೋಜ್ ಪೋಷಕರು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!