ತೀರ್ಥಹಳ್ಳಿ, ಸಾಗರದಲ್ಲೂ ನಾಳೆ ಬಂದ್, ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಪ್ಲಾನ್

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 09 ಸೆಪ್ಟೆಂಬರ್ 2018

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್’ಗೆ ತೀರ್ಥಹಳ್ಳಿಯಲ್ಲೂ ಬೆಂಬಲ ನೀಡಬೇಕು ಅಂತಾ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಪೆಟ್ರೋಲ್ ಬೆಲೆ ಏರಿಕೆಯ ಪರಿಣಾಮಗಳ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕಾಗುತ್ತದೆ. ಬೆಲೆ ಏರಿಕೆ ಹೀಗೇ ಮುಂದುವರೆದರೆ, ಅಕ್ಟೋಬರ್ ಮೊದಲ ವಾರಕ್ಕೆ ಲೀಟರ್ ಪೆಟ್ರೋಲ್’ಗೆ 100 ರೂ. ಆಗುವ ಸಾಧ್ಯತೆ ಎಂದು ಎಚ್ಚರಿಸಿದರು. ಅಲ್ಲದೇ, ಸ್ವಯಂ ಪ್ರೇರಿತವಾಗಿ ಎಲ್ಲರೂ ಬಂದ್’ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಾಗರದಲ್ಲೂ ಬಂದ್’ಗೆ ಬೆಂಬಲಿಸುವಂತೆ ಮನವಿ

ಭಾರತ್ ಬಂದ್’ಗೆ ಸಾಗರ ತಾಲೂಕಿನಲ್ಲಿ ಬೆಂಬಲ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ. ಬಂದ್ ವೇಳೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 741170200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!