ದಿಢೀರ್ ನಾಪತ್ತೆಯಾಗಿದ್ದ ಅಭ್ಯರ್ಥಿ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ

ಶಿವಮೊಗ್ಗ ಲೈವ್.ಕಾಂ | ಸೊರಬ

ದಿಢೀರ್ ನಾಪತ್ತೆಯಾಗಿದ್ದ ಚುನಾವಣಾ ಅಭ್ಯರ್ಥಿ, ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇದರಿಂದ ಹುಟ್ಟಿಕೊಂಡಿದ್ದ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಸ್ವರಾಜ್ ಇಂಡಿಯಾ ಪಕ್ಷದ ಸೊರಬ ಅಭ್ಯರ್ಥಿ ಹುಣವಳ್ಳಿ ಗಂಗಾಧರಪ್ಪ ನಾಪತ್ತೆಯಾಗಿದ್ದರು. ಈ ಸಂಬಂಧ ಪಕ್ಷದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಪತ್ರಿಕಾಗೋಷ್ಠಿ ನಡೆಸಿ, ಅಭ್ಯರ್ಥಿ ಹುಡುಕಿಕೊಡುವಂತೆ ಆಗ್ರಹಿಸಿದ್ದರು. ಹುಣವಳ್ಳಿ ಗಂಗಾಧರಪ್ಪ ನಾಪತ್ತೆ ಪ್ರಕರಣ, ಸೊರಬ ಕ್ಷೇತ್ರದಲ್ಲಿ ಊಹಾಪೋಹ ಹುಟ್ಟಿಸಿತ್ತು.

ದಿಢೀರ್ ಪ್ರತ್ಯಕ್ಷವಾದರು ಅಭ್ಯರ್ಥಿ

ನಾಲ್ಕು ದಿನದಿಂದ ಕಣ್ಮರೆಯಾಗಿದ್ದ ಹುಣವಳ್ಳಿ ಗಂಗಾಧರಪ್ಪ, ಇವತ್ತು ದಿಢೀರ್ ಪೊಲೀಸ್ ಠಾಣೆಗೆ ಆಗಮಿಸಿದರು. ತಾವು ನಾಪತ್ತೆಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ವೈಯಕ್ತಿಕ ಕೆಲಸದ ಮೇಲೆ ಸಾಗರದ ಆವಿನಹಳ್ಳಿ ಹೋಬಳಿಯ ಹುಲಿದೇವರಬನದ ಸಂಬಂಧಿಯೊಬ್ಬರ ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದರು. ಅಲ್ಲದೇ, ಚುನಾವಣಾ ಪ್ರಚಾರ ಮುಂದುವರೆಸುವುದಾಗಿಯೂ ಪೊಲೀಸರಿಗೆ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!