ಮರಕ್ಕೆ ನೇಣು ಬಿಗಿದುಕೊಂಡು ಪಾಲಿಟೆಕ್ನಿಕ್ ಕಾಲೇಜು ನೌಕರ ಆತ್ಮಹತ್ಯೆ

ಶಿವಮೊಗ್ಗ ಲೈವ್.ಕಾಂ | ಸೊರಬ | 05 ಅಕ್ಟೋಬರ್ 2018

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಗುತ್ತಿಗೆ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಈತ ಕೆಲಸಕ್ಕೆ ಸೇರಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಾಗೇಂದ್ರ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡಿ ದರ್ಜೆ ನೌಕರನಾಗಿ ಕೆಲಸಕ್ಕೆ ಸೇರಿದ್ದ ನಾಗೇಂದ್ರ, ಸೊರಬ ಪಟ್ಟಣದ ಸಮೀಪದ ಉದ್ರಿ ರಸ್ತೆಯ ಪಕ್ಕದಲ್ಲಿರುವ ಜಮೀನಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ನಾಗೇಂದ್ರ ಬೆಳಗಾವಿ ಮೂಲದವನು.

ಈ ಸಂಬಂಧ ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!