ಸೊರಬದಲ್ಲಿ ಸಾವಿರ ಸಾವಿರ ಬೆಂಬಲಿಗರೊಂದಿಗೆ ಮಧು ಬಂಗಾರಪ್ಪ ಮೆರವಣಿಗೆ

ಲೈವ್ ಕರ್ನಾಟಕ.ಕಾಂ | ಸೊರಬ

ನಾಮಪತ್ರ ಸಲ್ಲಿಕೆಗೂ ಮುಂಚೆ ಶಾಸಕ ಮಧು ಬಂಗಾರಪ್ಪ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಕ್ಷೇತ್ರದ ವಿವಿಧೆಡೆಯಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಮತ್ತು ಮಧು ಬಂಗಾರಪ್ಪ ಬೆಂಬಲಿಗರು, ಪಟ್ಟಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದರು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಘಟಾನುಘಟಿಗಳಿಂದ ನಾಮಪತ್ರ

ನಾಮಪತ್ರ ಸಲ್ಲಿಕೆಗೂ ಮುಂಚೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ತೆರಳಿದ ಮಧು ಬಂಗಾರಪ್ಪ, ಪೂಜೆ ಸಲ್ಲಿಸಿದರು. ಈ ಸಂದರ್ಭ, ಸಹೋದರಿಯರಾದ ಗೀತಾ ಶಿವರಾಜ್ ಕುಮಾರ್ ಮತ್ತು ಸುಜಾತಾ ತಿಲಕ್ ಕುಮಾರ್ ಇದ್ದರು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಎರಡು ನಾಮಪತ್ರ ಸಲ್ಲಿಸಿದ ಈಶ್ವರಪ್ಪ

ಪೂಜೆ ಬಳಿಕ, ತಾಲೂಕು ಕಚೇರಿವರೆಗೂ ಮಧು ಬಂಗಾರಪ್ಪ ಮೆರವಣಿಗೆ ಮೂಲಕ ಆಗಮಿಸಿದರು. ಈ ವೇಳೆ, ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಶಾಸಕ ಮಧು ಬಂಗಾರಪ್ಪ ಪರವಾಗಿ ಘೋಷಣೆ ಕೂಗಿದರು. ಜೆಡಿಎಸ್ ಗೆಲುವಿಗಾಗಿ ಹಾರೈಸಿದರು.

ಇದನ್ನೂ ಓದಿ | ಭದ್ರಾವತಿಯಲ್ಲಿ ಸಂಗಮೇಶ್ವರ್ ಗೆ ಠೇವಣಿ ಹಣ ನೀಡಿ ಹಾರೈಸಿದ ಬೆಂಬಲಿಗ

ಇನ್ನು, ತಾಲೂಕು ಕಚೇರಿಯಲ್ಲಿ ಮಧು ಬಂಗಾರಪ್ಪ, ಸಹೋದರಿ ಸುಜಾತಾ ತಿಲಕ್ ಕುಮಾರ್ ಅವರೊಂದಿಗೆ ತೆರಳಿ, ನಾಮಪತ್ರ ಸಲ್ಲಿಸಿದರು.

ಮಧು ಬಂಗಾರಪ್ಪ ಮೆರವಣಿಗೆಯ ಫುಲ್ ವಿಡಿಯೋ ನೋಡಿ |

ಸೊರಬದಲ್ಲಿ ಸಾವಿರ ಸಾವಿರ ಬೆಂಬಲಿಗರಿಂದ ಮಧು ಬಂಗಾರಪ್ಪ ಮೆರವಣಿಗೆ

ಸೊರಬದಲ್ಲಿ ಸಾವಿರ ಸಾವಿರ ಬೆಂಬಲಿಗರಿಂದ ಮಧು ಬಂಗಾರಪ್ಪ ಮೆರವಣಿಗೆ Madhubangarappa Abimani Balaga Madhu Bangarappa

Posted by Live Karnataka Shivamogga on Thursday, 19 April 2018

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!