ಹೈಟೆಕ್ ಟೆಕ್ನಾಲಜಿ ಮೂಲಕ ಸೊರಬದಲ್ಲಿ ಏತ ನೀರಾವರಿ ಯೋಜನೆಗಳ ಸರ್ವೆ, ಮ್ಯಾಪ್ ಹಿಡಿದು ಫೀಲ್ಡಿಗಿಳಿದರು ಎಂಎಲ್ಎ

ಶಿವಮೊಗ್ಗ ಲೈವ್.ಕಾಂ | ಸೊರಬ

ಮ್ಯಾಪ್ ಹಿಡಿದು ಖುದ್ದು ಪರಿಶೀಲನೆಗಿಳಿದ ಎಂಎಲ್ಎ. ಅಧಿಕಾರಿಗಳು, ತಜ್ಞರ ಟೀಮ್’ನೊಂದಿಗೆ ತಾಲೂಕಿನಾದ್ಯಂತ ಪ್ರವಾಸ. ಭರವಸೆ ನೀಡಿದಂತೆ ನೀರಾವರಿ ಸಮಸ್ಯೆ ಬಗೆಹರಿಸಲು ಫೀಲ್ಡಿಗಿಳಿದ ಕುಮಾರ್ ಬಂಗಾರಪ್ಪ.

ಸೊರಬ ತಾಲೂಕಿನ ನೀರಿನ ಬವಣೆ ನೀಗಿಸಲು, ಶಾಸಕ ಕುಮಾರ್ ಬಂಗಾರಪ್ಪ ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ನಿನ್ನೆಯಿಂದ ತಾಲೂಕಿನಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅಧಿಕಾರಿಗಳು, ತಜ್ಞರ ಟೀಂ ಇವರೊಂದಿಗಿದೆ. ಸೊರಬ ತಾಲೂಕಿಗೆ ಕುಡಿಯಲು ಮತ್ತು ಕೃಷಿಗೆ ಬಳಕೆಗೆ ನೀರಿನ ಅವಶ್ಯಕತೆ ಪೂರೈಸಿವ ಏತ ನೀರಾವರಿ ಯೋಜನೆಗಳ ಸರ್ವೇ ಕಾರ್ಯ ಆರಂಭವಾಗಿದೆ.

ಎಲ್ಲೆಲ್ಲಿ ಪ್ರವಾಸ? ಹೇಗಿದೆ ಸರ್ವೇ ಕಾರ್ಯ?

ವಿವಾದಕ್ಕೀಡಾಗಿ ದಶಕದಿಂದ ನಿಂತಿದ್ದ ದಂಡಾವತಿ ಯೋಜನೆಗೆ ಪುನರ್ ಚಾಲನೆ ನೀಡುವ ಸಾಧ್ಯತೆ ಇದೆ. ಹಾಗಾಗಿ ಯೋಜನೆಯ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೂಡಿ, ಮೂಗೂರು ಏತ ನೀರಾವರಿ ಸರ್ವೆ ಕಾರ್ಯವೂ ನಡೆದಿದೆ. ನಿನ್ನೆ ಕುಮ್ಮೂರು, ಚಿಕ್ಕಾವಲಿ, ಉದ್ರಿ, ಮಂಚಿ, ಬಿದರಗೇರಿ, ಗೆಂಡ್ಲ, ಹಾಯ, ಕುಬಟೂರು ಸೇರಿದಂತೆ ವಿವಿಧೆಡೆ ಸರ್ವೆ ನಡೆಸಿದರು. ಇವತ್ತು ಬೆಳಗ್ಗೆಯಿಂದ ಮತ್ತೆ ಸರ್ವೆ ಕಾರ್ಯ ಆರಂಭಿಸಲಾಗಿದೆ. ಕೋಟಿಪುರದಿಂದ ಶಾಸಕ ಕುಮಾರ್ ಬಂಗಾರಪ್ಪ ಸರ್ವೇ ಆರಂಭಿಸಿದ್ದಾರೆ.

ಸರ್ವೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರೈತರ ಜಮೀನಿಗೆ ಹೆಚ್ಚು ಹಾನಿಯಾಗದಂತೆ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಹಾಗಾಗಿ ಜಿಪಿಎಸ್ ತಂತ್ರಜ್ಞಾನದ ಬಳಸಿ ಸರ್ವೆ ನಡೆಸಲಾಗುತ್ತಿದೆ. ಇನ್ನು, ಖುದ್ದು ಶಾಸಕ ಕುಮಾರ್ ಬಂಗಾರಪ್ಪ ಅವರೇ ಮ್ಯಾಪ್ ಹಿಡಿದು ಯೋಜನೆಗಳ ಸರ್ವೆಗೆ ಇಳಿದಿದ್ದಾರೆ.

ಚುನಾವಣೆ ಸಂದರ್ಭ, ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದರು. ಶಾಸಕರಾದ ನಂತರ ಈ ಕುರಿತು ಜಲಸಂಪನ್ಮೂಲ ಸಚಿವರೊಂದಿಗೂ ಚರ್ಚೆ ನಡೆಸಿದ್ದರು. ಈಗ ನೀರಾವರಿ, ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಸರ್ವೆ ಆರಂಭಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಇತರೆ ಸುದ್ದಿಗಳು |

Leave a Reply

error: Content is protected !!