ಲಂಚ ಪಡೆದು ಸಿಕ್ಕಿಬಿದ್ದ ಗುತ್ತಿಗೆ ನೌಕರ, ಭ್ರಷ್ಟ ಅಧಿಕಾರಿಗೆ ಹೇಗೆ ಚಳಿ ಬಿಡಿಸಿದರು ಗೊತ್ತಾ ಶಾಸಕ ಕುಮಾರ್ ಬಂಗಾರಪ್ಪ?

ಶಿವಮೊಗ್ಗ ಲೈವ್.ಕಾಂ | ಸೊರಬ

ರೈತ ಮಹಿಳೆಯೊಬ್ಬರಿಂದ ಲಂಚ ಪಡೆದ ಗುತ್ತಿಗೆ ನೌಕರನ ವಿರುದ್ಧ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಗರಂ ಆಗಿದ್ದಾರೆ. ನೇರವಾಗಿ ಕಚೇರಿಗೆ ಆಗಮಿಸಿ ಚಳಿ ಬಿಡಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೊರಬ ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುತ್ತಿಗೆ ನೌಕರ ಮುಬಾರಕ್, ಮಹಿಳೆಯೊಬ್ಬರಿಂದ ಲಂಚ ಪಡೆದಿದ್ದರು. ತಮ್ಮ ಜಮೀನು ನೋಂದಣಿಗೆ ಆಗಮಿಸಿದ್ದ ಮಹಿಳೆಯಿಂದ ಸರ್ಕಾರಿ ಮೊತ್ತ 280 ರೂ. ಪಡೆಯುವ ಬದಲು, ಮುಬಾರಕ್, 880 ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಮಹಿಳೆ ಈ ವಿಚಾರ ತಿಳಿಸಿದ್ದಾರೆ.

‘ದನ ಕಾಯೋಕೆ ಬಂದಿದ್ದೀರಾ? ಹಣ ವಾಪಸ್ ಕೊಡಿ’

ದಾಖಲೆಗಳನ್ನು ಹಿಡಿದು ಕಚೇರಿಯೊಳಗೆ ಬಂದ ಶಾಸಕ ಕುಮಾರ್ ಬಂಗಾರಪ್ಪ, ಅಧಿಕಾರಿ ವಿರುದ್ಧ ಗರಂ ಆದರು. ‘ನಿನ್ನೆ 700 ರೂಪಾಯಿವರೆಗೂ ಡಿಮಾಂಡು, ಇವತ್ತು 800 ರೂಪಾಯಿವರೆಗೂ ಡಿಮಾಂಡು ಯಾಕೆ’ ಅಂತಾ ಪ್ರಶ್ನಿಸಿದರು. ಅಷ್ಟೇ ಅಲ್ಲಾ, ‘ದನ ಕಾಯೋಕೆ ಬಂದಿದ್ದೀರಾ? ಆ ಮಹಿಳೆಯ ಹಣ ವಾಪಸ್ ಕೊಡಿ’ ಅಂತಾ ಹೇಳಿದರು. ಅಷ್ಟೇ ಅಲ್ಲಾ, ಲಂಚ ಪಡೆದ ಗುತ್ತಿಗೆ ನೌಕರ ಮುಬಾರಕ್’ನನ್ನು ವಜಾಗೊಳಿಸುವಂತೆ ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಸೂಚಿಸಿದರು.

ಲಂಚ ಪಡೆದಿದ್ದ ಅಧಿಕಾರಿಗೆ ಶಾಸಕ ಕುಮಾರ್ ಬಂಗಾರಪ್ಪ ಚಳಿ ಬಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲಾ, ಕುಮಾರ್ ಬಂಗಾರಪ್ಪ ಅವರ ಈ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.

WATCH VIDEO |

ಭ್ರಷ್ಟ ಅಧಿಕಾರಿಗೆ ಹೇಗೆ ಚಳಿ ಬಿಡಿಸಿದರು ಗೊತ್ತಾ ಶಾಸಕ ಕುಮಾರ್ ಬಂಗಾರಪ್ಪ?

ಲಂಚ ಪಡೆದು ಸಿಕ್ಕಿಬಿದ್ದ ಗುತ್ತಿಗೆ ನೌಕರ, ಭ್ರಷ್ಟ ಅಧಿಕಾರಿಗೆ ಹೇಗೆ ಚಳಿ ಬಿಡಿಸಿದರು ಗೊತ್ತಾ ಶಾಸಕ ಕುಮಾರ್ ಬಂಗಾರಪ್ಪ?

Posted by Shivamogga Live on Saturday, 21 July 2018

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!