ಸೊರಬದಲ್ಲಿ ಮಲೆನಾಡ ಜೀವನಶೈಲಿ ಸಾರುವ ಕೆರೆ ಬೇಟೆ, ಕೆಜಿಗಟ್ಟಲೆ ಮೀನು ಹಿಡಿದು ಗ್ರಾಮಸ್ಥರ ಸಂಭ್ರಮ | VIDEO

ಶಿವಮೊಗ್ಗ ಲೈವ್.ಕಾಂ | ಸೊರಬ

ಮಲೆನಾಡು ಭಾಗದಲ್ಲಿ ಹೆಸರುವಾಸಿಯಾಗಿರುವ ಕೆರೆ ಬೇಟೆ, ಸೊರಬ ತಾಲೂಕಿನ ಉರಗನಹಳ್ಳಿಯ ದೊಡ್ಡಕೆರೆಯಲ್ಲಿ ನಡೆದಿದೆ. ಸುಮಾರು ಎರಡು ಸಾವಿರ ಜನರು, ಈ ಕೆರೆ ಬೇಟೆಯಲ್ಲಿ ಭಾಗವಹಿಸಿದ್ದರು.

ಸೊರಬ ತಾಲೂಕಿನ ದೊಡ್ಡ ಕೆರೆಗಳ ಪೈಕಿ, ಉರಗನಹಳ್ಳಿಯ ಕೆರೆಯೂ ಒಂದು. ಹೆಸರಿಗೆ ತಕ್ಕಂತೆ ದೊಡ್ಡಕೆರೆ ಆಗಿರುವುದರಿಂದ, ಇಲ್ಲಿ ಮೀನುಗಳ ಸಂಖ್ಯೆಯೂ ಹೆಚ್ಚು. ಮಳೆ ಶುರುವಾಗುತ್ತಿದ್ದಂತೆ, ಮೀನುಗಳು ಚಿಲುಮೆ ಮೂಲಕ ಹತ್ತಿ ಹೋಗುತ್ತವೆ. ಆದ್ದರಿಂದ ಅವುಗಳನ್ನು ಹಿಡಿಯಲು, ಕೆರೆ ಬೇಟೆ ಆಯೋಜಿಸಲಾಗುತ್ತದೆ.

ಉರಗನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪ್ರತೀ ಬಾರಿಯೂ ಮೀನು ಬೇಟೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಂಕ್ರಿ ಹಿಡಿದು, ಒಟ್ಟಿಗೆ ಕೆರೆ ಇಳಿಯುವ ಜನರು, ಕೊನೆಗೆ ಕೆಜಿಗಟ್ಟಲೆ ಮೀನು ಹಿಡಿದು, ಸಂಭ್ರಮಿಸುತ್ತಾರೆ. ಮಲೆನಾಡಿನಲ್ಲಿ ಹಿಂದಿನಿಂದಲೂ ಕೆರೆ ಬೇಟೆ ನಡೆಯುತ್ತಿದೆ. ಇತ್ತೀಚೆಗೆ ಕೆರೆ ಬೇಟೆ ಕಡಿಮೆಯಾಗಿದ್ದರೂ, ಅಲ್ಲಲ್ಲಿ ಇವುಗಳನ್ನು ಆಯೋಜಿಸಲಾಗುತ್ತಿದೆ.

ಫುಲ್ ವಿಡಿಯೋ ನೋಡಲು ಇದರ ಮೇಲೆ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!