ಸೊರಬದಲ್ಲಿ ಅಬಕಾರಿ ಇಲಾಖೆ ಡ್ರೋಣ್ ಕಣ್ಣಿಗೆ ಬಿತ್ತು ರಾಶಿ ರಾಶಿ ಗಾಂಜಾ ಬೆಳೆ

ಶಿವಮೊಗ್ಗ ಲೈವ್.ಕಾಂ | ಸೊರಬ

ಅಬಕಾರಿ ಇಲಾಖೆಯ ಡ್ರೋಣ್’ಗಳು ಭರ್ಜರಿ ಬೇಟೆಯಾಡಿವೆ. ಕಾರ್ಯಾಚರಣೆಗೆ ಇಳಿದ ಎರಡನೇ ದಿನವೇ, ಭಾರೀ ಪ್ರಮಾಣದ ಗಾಂಜಾ ಬೆಳೆ ಪತ್ತೆ ಹಚ್ಚಿವೆ.

ಇದನ್ನೂ ಓದಿ | ಶಿವಮೊಗ್ಗದ ಮೂರು ಕಡೆ ಗಾಂಜಾ ಶೋಧಕ್ಕಿಳಿದ ಅಬಕಾರಿ ಇಲಾಖೆ ಡ್ರೋಣ್’ಗಳು, ಹೇಗಿತ್ತು ಗೊತ್ತಾ ಆಪರೇಷನ್?

ಇವತ್ತು ಬೆಳಗ್ಗೆಯಿಂದ ಸೊರಬ ತಾಲೂಕಿನ ವಿವಿಧೆಡೆ, ಅಬಕಾರಿ ಇಲಾಖೆ ಡ್ರೋಣ್ ಹಾರಿಬಿಟ್ಟು, ಕಾರ್ಯಾಚರಣೆ ನಡೆಸುತ್ತಿದೆ. ಸಾರೆಕೊಪ್ಪ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆಯಾಗಿದೆ.

ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸೊರಬ ಪೊಲೀಸರು ಗಾಂಜಾ ಬೆಳೆಯನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆ ಉಪ ಆಯುಕ್ತ ವೈ.ಆರ್.ಮೋಹನ್ ನೇತೃತ್ವದಲ್ಲಿ ದಾಳಿ ಮುಂದುವರೆದಿದೆ.

ದಾಳಿಯ ವಿಡಿಯೋ

ಸೊರಬದಲ್ಲಿ ಅಬಕಾರಿ ಇಲಾಖೆ ಡ್ರೋಣ್ ಕಣ್ಣಿಗೆ ಬಿತ್ತು ರಾಶಿ ರಾಶಿ ಗಾಂಜಾ ಬೆಳೆ

ಸೊರಬದಲ್ಲಿ ಅಬಕಾರಿ ಇಲಾಖೆ ಡ್ರೋಣ್ ಕಣ್ಣಿಗೆ ಬಿತ್ತು ರಾಶಿ ರಾಶಿ ಗಾಂಜಾ ಬೆಳೆ

Posted by Shivamogga Live on Thursday, August 2, 2018

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!