ದಂಡಾವತಿ ಯೋಜನೆಗೆ ಮರುಜೀವ, ಪ್ರಾಜೆಕ್ಟ್ ಜಾರಿಯಾಗಲೇಬೇಕು ಅಂತಿದ್ದಾರೆ ಯಡಿಯೂರಪ್ಪ

ಲೈವ್​ ಕರ್ನಾಟಕ.ಕಾಂ | ಸೊರಬ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ದಂಡಾವತಿ ಯೋಜನೆಗೆ ಮರುಜೀವ ನೀಡಿದ್ದಾರೆ. ಸೊರಬದಲ್ಲಿ ನಡೆದ ಪರಿವರ್ತನಾ ಯಾತ್ರೆ ವೇಳೆ, ಈ ಯೋಜನೆ ಜಾರಿಯಾಗಲೇಬೇಕು ಎಂದು ಪ್ರತಿಪಾದಿಸಿದ್ದಾರೆ.

402 ಕೋಟಿ ಮಂಜೂರಾಗಿದೆ, ಟೆಂಡರ್​ ಕೂಡ ಆಗಿದೆ

ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ತಾವು ಮುಖ್ಯಮಂತ್ರಿಯಾಗಿದ್ದಾಗ, ಮೊದಲ ಸಂಪುಟ ಸಭೆಯಲ್ಲೇ ದಂಡಾವತಿಯ ಯೋಜನೆಗೆ 402 ಕೋಟಿ ರೂ. ಮಂಜೂರು ಮಾಡಿದ್ದಾಗಿ ತಿಳಿಸಿದರು. ಅಲ್ಲದೇ ಈ ಕಾರ್ಯಕ್ಕೆ ಟೆಂಡರ್ ಕೂಡ ಆಗಿತ್ತು. ಆದರೆ ಈಗಿನ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಯೋಜನೆ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ದಂಡಾವತಿ ಯೋಜನೆ ಜಾರಿಯಾಗಲೇಬೇಕು ಎಂದು ಯಡಿಯೂರಪ್ಪ ಪ್ರತಿಪಾದಿಸಿದರು. ಇದರಿಂದ ರೈತರು, ಕೃಷಿಕರು ನೆಮ್ಮದಿಯಿಂದ ಬದುಕಬಹುದು. ಆದರೆ ಈಗಿನ ಶಾಸಕರಿಗೆ ರೈತರ ನೆಮ್ಮದಿ ಬೇಕಿಲ್ಲ ಎಂದು ಆರೋಪಿಸಿದರು.

ಮಧು ಬಂಗಾರಪ್ಪ ಸದ್ದಾಂ ಹುಸೇನ್​ ಇದ್ದಂಗೆ

ಶಾಸಕ ಮಧು ಬಂಗಾರಪ್ಪ ಅವರ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ಟೀಕಾಪ್ರಹಾರ ನಡೆಸಿದರು. ಮಧು ಬಂಗಾರಪ್ಪ ಅವರು ಸದ್ದಾ ಹುಸೇನ್ ಇದ್ದಂತೆ ಎಂದು ಲೇವಡಿ ಮಾಡಿದರು. ಅವರನ್ನು ನಾವೆಲ್ಲರು ಒಟ್ಟಾಗಿ ಸೋಲಿಸಬೇಕು ಎಂದು ಹೇಳಿದರು.

ಶಾಸಕ ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡರಾದ ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಸುರೇಶ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಕುಮಾರ ಬಂಗಾರಪ್ಪ ಮತ್ತಿತರರು ಇದ್ದರು.

Leave a Reply

error: Content is protected !!