ವಿದ್ಯಾರ್ಥಿಯಿಂದ ಲಂಚ ಪಡೆಯುತ್ತಿದ್ದ ಪ್ರಿನ್ಸಿಪಾಲ್ ಶಿವಮೊಗ್ಗ ಎಸಿಬಿ ಬಲೆಗೆ

ಶಿವಮೊಗ್ಗ ಲೈವ್.ಕಾಂ | ಸೊರಬ | 11 ಅಕ್ಟೋಬರ್ 2018

ಪಿಯುಸಿ ಮಾರ್ಕ್ಸ್’ಕಾರ್ಡ್’ನಲ್ಲಿ ಹೆಸರು ತಿದ್ದುಪಡಿಗೆ ಬಂದಿದ್ದ ವಿದ್ಯಾರ್ಥಿಯಿಂದ ಲಂಚ ಪಡೆಯುತ್ತಿದ್ದ ಸಂದರ್ಭ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.

ಸೊರಬ ತಾಲೂಕು ಆನವಟ್ಟಿಯ ಸರ್ಕಾರಿ  ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲ್ ಜಿ.ಮನೋಹರ್, ಬಂಧಿತರು. ಪಿಯುಸಿ ಅಂಕಪಟ್ಟಿಯಲ್ಲಿ ಹೆಸರು ತಿದ್ದುಪಡಿಗಾಗಿ ಬಂದಿದ್ದ ವಿದ್ಯಾರ್ಥಿಯೊಬ್ಬನಿಂದ 700 ರೂ. ಲಂಚ ಪಡೆಯುತ್ತಿದ್ದರು ಅಂತಾ ಎಸಿಬಿ ಪ್ರಕಟಣೆ ತಿಳಿಸಿದೆ.

ಮನೋಹರ್ ಅವರು ವಿದ್ಯಾರ್ಥಿಯಿಂದ 800 ರೂ. ಲಂಚಕ್ಕೆ ಡಿಮಾಂಡ್ ಮಾಡಿದ್ದರು. ಶಿವಮೊಗ್ಗ ಎಸಿಬಿ ಡಿವೈಎಸ್’ಪಿ ಚಂದ್ರಪ್ಪ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ತಿಪ್ಪೇಸ್ವಾಮಿ ಮತ್ತು ತಂಡ ದಾಳಿ ನಡೆಸಿದೆ. ಪ್ರಾಂಶುಪಾಲರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!