ಅಂಜನಾಪುರ ಜಲಾಶಯ ಫುಲ್, ಯಡಿಯೂರಪ್ಪ ಅವರಿಂದ ಬಾಗಿನ, ಅತ್ಯಾಧುನಿಕ ಪಾರ್ಕ್ ಉದ್ಘಾಟನೆ

ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ

ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವತ್ತು ಬಾಗಿನ ಅರ್ಪಿಸಿದರು.

ಜಿಲ್ಲಾ ಪ್ರವಾಸದಲ್ಲಿರುವ ಯಡಿಯೂರಪ್ಪ, ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಕ್ಕೆ ತೆರಳಿ, ಬಾಗಿನ ಅರ್ಪಿಸಿದರು. ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

ಈಸೂರು ಹೋರಾಟ ಮಾದರಿ ಪಾರ್ಕ್ ಉದ್ಘಾಟನೆ

ಅಂಜನಾಪುರ ಜಲಾಶಯದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಪಾರ್ಕನ್ನು, ಯಡಿಯೂರಪ್ಪ ಉದ್ಘಾಟಿಸಿದರು. ಈಸೂರು ಹೋರಾಟದ ಹಲವು ದೃಷ್ಟಾಂತಗಳನ್ನು ಸಾರುವ ಕಲಾಕೃತಿಗಳು ಈ ಪಾರ್ಕ್’ನಲ್ಲಿದೆ. ಉದ್ಘಾಟನೆ ಬಳಿಕ ಯಡಿಯೂರಪ್ಪ, ಪಾರ್ಕ್ ಸುತ್ತ ರೌಂಡ್ ಹೊಡೆದರು.

7.50 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಈ ಭಾಗದಲ್ಲಿನ ಅತ್ಯಾಧುನಿಕ ಪಾರ್ಕ್ ಇದಾಗಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಜನರು ಪಾರ್ಕ್ ವೀಕ್ಷಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!