ಯಡಿಯೂರಪ್ಪ ವಿರುದ್ಧ ನಾಮಪತ್ರ ಸಲ್ಲಿಸಿದ ಆರ್’ಎಸ್ಎಸ್ ಪ್ರಚಾರಕ

ಲೈವ್ ಕರ್ನಾಟಕ.ಕಾಂ | ಶಿಕಾರಿಪುರ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್.ಎಸ್.ಎಸ್ ಪ್ರಚಾರಕ್ಕೊಬ್ಬರು ಕಣಕ್ಕಿಳಿದಿದ್ದಾರೆ. ಗಣವೇಶದಲ್ಲಿಯೇ ಬಂದು ನಾಮಪತ್ರ ಸಲ್ಲಿಸಿದ್ದಾರೆ.

ಹತ್ತು ವರ್ಷ ಆರ್’ಎಸ್ಎಸ್ ಪ್ರಚಾರಕರಾಗಿದ್ದ ಹನುಮೇಗೌಡ, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆರ್’ಎಸ್ಎಸ್’ನ ರಾಜಕೀಯ ಅಂಗವಾಗಿರುವ ಬಿಜೆಪಿಯಲ್ಲಿ ಕಳಂಕಿತರು, ಸಮಯಸಾಧಕರು ಹೆಚ್ಚಾಗಿದ್ದಾರೆ. ಇವರನ್ನು ಮಣಿಸುವುದೇ ತಮ್ಮ ಗುರಿ ಅಂತಾ ಯಡಿಯೂರಪ್ಪ ವಿರುದ್ಧ ಹನುಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಬೆಂಗಳೂರಿನ ಕಾಮಾಕ್ಷಿಪಾಳ್ಯದವರಾದ ಹನುಮೇಗೌಡ, ರಾಜ್ಯದ ವಿವಿಧೆಡೆ 10 ವರ್ಷಕ್ಕೂ ಹೆಚ್ಚು ಕಾಲ, ಪ್ರಚಾರಕರಾಗಿದ್ದರು.

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!