ಕಾರು, ಬೈಕ್ ಮಧ್ಯೆ ಭೀಕರ ಅಪಘಾತ | ಕ್ಲಿಕ್ ಮಾಡಿ ಫುಲ್ ನ್ಯೂಸ್ ಓದಿ

ಶಿವಮೊಗ್ಗ ಲೈವ್.ಕಾಂ | ನ್ಯಾಮತಿ

ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಬೈಕ್’ನಲ್ಲಿ ಸಾವರನೊಬ್ಬ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಿಕಾರಿಪುರದ ದೇವರಾಜ ಅರಸ್ ಬಡಾವಣೆಯ ರಮೇಶ್ (22) ಮೃತ ವ್ಯಕ್ತಿ. ಪ್ರವೀಣ್ (25) ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೈಕ್’ನಲ್ಲಿ ತೆರಳುತ್ತಿದ್ದಾಗ, ಕಾರು ಡಿಕ್ಕಿಯಾಗಿದೆ. ಕಾರು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿತ್ತು.

ನ್ಯಾಮತಿ ಬಳಿಯ ಚಿನ್ನಿಕಟ್ಟೆ ಬಳಿ ಇವತ್ತು ಮಧ್ಯಾಹ್ನ ಅಪಘಾತ ಸಂಭವಿಸಿದೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!