ಹೆಲಿಕಾಪ್ಟರ್ ನಲ್ಲಿ ಬಂದು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿ

ಲೈವ್ ಕರ್ನಾಟಕ.ಕಾಂ | ಶಿಕಾರಿಪುರ

ಹೆಲಿಕಾಪ್ಟರ್ ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ.. ಯಡಿಯೂರಪ್ಪ ಮಾದರಿಯಲ್ಲೇ ಉಮೇದುವಾರಿಕೆ ಸಲ್ಲಿಸಿದ ಯುವಕ.. ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧವೇ ಕಣಕ್ಕಿಳಿಯುತ್ತಿದ್ದಾನೆ ಬಂಗಾರಪ್ಪ ಅಭಿಮಾನಿ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾದರಿಯಲ್ಲೇ, ಹೆಲಿಕಾಪ್ಟರ್ ನಲ್ಲಿ ಬಂದ ಯುವಕನೊಬ್ಬ, ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾನೆ. ಆತನ ಸ್ಟೈಲ್, ಆತನ ಎಂಟ್ರಿ ಕಂಡು ಶಿಕಾರಿಪುರದ ಜನ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟಕ್ಕೂ, ಹೆಲಿಕಾಪ್ಟರ್ ನಲ್ಲಿ ಬಂದು, ನಾಮಿನೇಷನ್ ಮಾಡಿದ ಯುವಕ ಯಾರು ಗೊತ್ತಾ? ವಿನಯ್ ರಾಜಾವತ್.

ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ವಿನಯ್ ರಾಜಾವತ್, ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ನೆರವೇರಿಸಿದರು. ಆ ಬಳಿಕ ಬೆಂಬಲಿಗರು, ಸ್ನೇಹಿತರ ಜೊತೆಗೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇಷ್ಟೆಲ್ಲ ಆದ ನಂತರ, ಅದೇ ಹೆಲಿಕಾಪ್ಟರ್ ನಲ್ಲಿ, ಬೆಂಗಳೂರಿಗೆ ಮರಳಿದ್ದಾರೆ ವಿನಯ್.

ಯಾರು ಈ ವಿನಯ್? ಶಿಕಾರಿಪುರದಲ್ಲಿ ನಾಮಿನೇಷನ್ ಮಾಡಿದ್ದೇಕೆ?

ವಿನಯ್ ರಾಜಾವತ್, ‘ವಿದ್ಯಾರ್ಥಿ’ ಎಂಬ ಸಂಘಟನೆಯ ಮುಖಂಡ. ಶಿವಮೊಗ್ಗದಲ್ಲಿ ಹಲವು ಹೋರಾಟಗಳನ್ನು ಮಾಡಿದ್ದಾನೆ. ಮೇಲಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿಮಾನಿ. ಶಿವಮೊಗ್ಗದ ಕುಂಚೇನಹಳ್ಳಿ ತಾಂಡದ ವಾಸಿ. ಓದಿದ್ದು ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ. ಸಹ್ಯಾದ್ರಿ ಕಾಲೇಜು ಸ್ಟೂಡೆಂಟ್ ಯುನಿಯನ್ ಲೀಡರ್ ಆಗಿದ್ದ ವಿನಯ್ ರಾಜವಾತ್, ವಿದ್ಯಾರ್ಥಿ ಸಂಘಟಗಳಲ್ಲೂ ತೊಡಗಿಸಿಕೊಂಡಿದ್ದರು. ಇದಿಷ್ಟೇ ಅಲ್ಲ, ಸಿನಿಮಾವೊಂದರಲ್ಲೂ ವಿನಯ್ ನಟಿಸಿದ್ದಾರೆ.

ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂಬ ಕಾರಣಕ್ಕೆ, ವಿನಯ್ ಸ್ನೇಹಿತರು, ಹೆಲಿಕಾಪ್ಟರ್ ಬುಕ್ ಮಾಡಿದರು. ಇದಕ್ಕಾಗಿ ಸ್ನೇಹಿತೆರೇ ಹೆಚ್ಚೂ ಕಡಿಮೆ ಒಂದೂವರೆ ಲಕ್ಷ ಖರ್ಚು ಮಾಡಿದ್ದಾರೆ.

Watch Full Video

ಹೆಲಿಕಾಪ್ಟರ್ ನಲ್ಲಿ ಬಂದು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ ಯುವಕ

ಹೆಲಿಕಾಪ್ಟರ್ ನಲ್ಲಿ ಬಂದು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜ ಹಳೇ ವಿದ್ಯಾರ್ಥಿ

Posted by Live Karnataka Shivamogga on Saturday, 21 April 2018

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!