ಮೋದಿ ಕಾಲಿಗೆ ಬೀಳಲು ರೆಡಿ ಅಂದ್ರು ಯಡಿಯೂರಪ್ಪ, ಕೆಟ್ಟದಾಗಿ ಮಾತಾಡೋಕೆ ನಂಗೂ ಬರುತ್ತೆ ಅಂತಿದ್ದಾರೆ ಈಶ್ವರಪ್ಪ

ಲೈವ್​ ಕರ್ನಾಟಕ.ಕಾಂ | ಶಿಕಾರಿಪುರ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ಯಾತ್ರೆ, ಶಿವಮೊಗ್ಗ ಜಿಲ್ಲೆ ಪ್ರವೇಶಿಸಿದೆ. ಶಿಕಾರಿಪುರದ ಸಂತೆ ಮೈದಾನದಲ್ಲಿ ಮೊದಲ ಸಮಾವೇಶ ನಡೆಸಲಾಯಿತು. ಬಿಜೆಪಿ ರಾಜ್ಯ ಘಟಕದ ಪ್ರಮುಖ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಾಷಣ ಮಾಡಿದ ನಾಯಕರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರದ್ಧ ವಾಗ್ದಾಳಿ ನಡೆಸಿದರೆ, ಯಡಿಯೂರಪ್ಪ ಮಾತ್ರ ಭಿನ್ನ ರೀತಿಯ ಬಾಷಣ ಮಾಡಿದರು. ಅಭಿವೃದ್ದಿ ಕೇಂದ್ರಿತವಾಗಿ ಮಾತನಾಡಿದರು. ಪ್ರಧಾನಿ ಕಾಲು ಹಿಡಿಯಲೂ ಸಿದ್ಧ ಎಂದು ತಿಳಿಸಿದರು.

ಇದನ್ನೂ ಓದಿ | ಶಿವಮೊಗ್ಗ ಸಿಟಿ ಕೇಸರಿಮಯ, ರಾರಾಜಿಸುತ್ತಿವೆ ಬಿಜೆಪಿ ಬಂಟಿಂಗ್ಸ್​, ಫ್ಲೆಕ್ಸ್​​

‘ಮುಸ್ಲಿಮರ ಕಣ್ಣಿಗೆ ಬೆಣ್ಣೆ, ಹಿಂದೂಗಳ ಕಣ್ಣಿಗೆ ಸುಣ್ಣ’

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್​.ಈಶ್ವರಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಅವರು ಹೇಳಿದ್ದಿಷ್ಟು.

  • ಸಿದ್ದರಾಮಯ್ಯ ಅವರು ಮುಸ್ಲಿಮರ ಕಣ್ಣಿಗೆ ಬೆಣ್ಣೆ, ಹಿಂದೂಗಳ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಒಂದೇ ರೀತಿ ನೋಡಲಿ.
  • ಆಜಾನ್​ ಕೂಗುವಾಗ ಬಾಷಣ ನಿಲ್ಲಿಸುವ ಸಿದ್ದರಾಮಯ್ಯ, ಮೀನು ತಿಂದು ಧರ್ಮಸ್ಥಳಕ್ಕೇಕೆ ಹೋಗುತ್ತಾರೆ.
  • ಪದೇ ಪದೇ ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅಪರಾಧಿಯಾಗಿ ಇಂದಿರಾಗಾಂಧಿ ಜೈಲಿಗೆ ಹೋಗಿ ಬಂದರಲ್ಲ. ಅದಕ್ಕೇನು ಹೇಳುತ್ತಾರೆ.
  • ಸಚಿವ ಮಹದೇವಪ್ಪ ಮತ್ತು ಅವರ ಮಗ ಮರಳು ಲೂಟಿ ಮಾಡುತ್ತಿದ್ದಾರೆ. ಆವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಗೋಹತ್ಯೆ ನಿಲ್ಲಿಸಿ, ಭಾರತ್ ಮಾತಾ ಕಿ ಜೈ ಅನ್ನುವವರನ್ನು ಕೋಮುವಾದಿ ಅನ್ನುತ್ತಾರೆ.
  • ನಾನು ನಿಮ್ಮಂತೆಯೇ ಕುರುಬ ಜನಾಂಗದಲ್ಲಿ ಹುಟ್ಟಿದವನು. ನಿಮಗಿಂತಲೂ ಕೆಟ್ಟದಾಗಿ ಮಾತನಾಡಲು ಬರುತ್ತದೆ. ಆದರೆ ನಮ್ಮ ಸಂಘಟನೆ ನಿಮ್ಮಂತಹ ಸಂಸ್ಕೃತಿ ಕಲಿಸಿಲ್ಲ.

ಇದನ್ನೂ ಓದಿ | ಶಿವಮೊಗ್ಗಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​

ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನ

ಪ್ರಧಾನಿ ಕಾಲು ಹಿಡಿಯೋಕೂ ಸಿದ್ಧ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬಾಷಣದಲ್ಲಿ, ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಿದರು. ನೀರಾವರಿ ಯೋಜನೆಗಾಗಿ ಪ್ರಧಾನಿಯ ಕಾಲು ಹಿಡಿಯಲೂ ಸಿದ್ಧ ಎಂದು ಘೋಷಿಸಿದರು.

  • ಕೇಂದ್ರ ಸರ್ಕಾರ ಶಿಕಾರಿಪುರದ ನೀರಾವರಿ ಯೋಜನೆಗಾಗಿ ಸಾವಿರ ಕೋಟಿ ರೂ. ಬಿಡುಗಡೆಗೆ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷದಿಂದಾಗಿ ಯೋಜನೆ ಕಾರ್ಯಗತವಾಗುತ್ತಿಲ್ಲ. ಈ ಯೋಜನೆಯನ್ನು ಜಾರಿಗೊಳಿಸುತ್ತೇನೆ.
  • ನೀರಾವರಿ ಯೋಜನೆಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪ್ರಧಾನಿ ಕಾಲು ಹಿಡಿದಾದರೂ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ.
  • 1600 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ರಸ್ತೆ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲೇ ಶುರು ಆಗುತ್ತೆ. ಕೇಂದ್ರ ಸಚಿವ ನಿತಿನ್ ಗಡ್ಕರ್ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ.
  • ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳು ನನ್ನ ಕಣ್ಮುಂದೆ ಇದ್ದಾವೆ. ಅವುಗಳನ್ನು ಪೂರ್ಣಗೊಳಿಸುತ್ತೇನೆ.

ಇದನ್ನೂ ಓದಿ | ಪರಿವರ್ತನಾ ಯಾತ್ರೆಯಲ್ಲಿ ಟಿಕೆಟ್ ಘೋಷಿಸಿದ ಯಡಿಯೂರಪ್ಪ, ಕೋರ್​ ಕಮಿಟಿಯಲ್ಲಿ ಚರ್ಚಿಸುತ್ತೇನೆ ಅಂತಿದ್ದಾರೆ ಈಶ್ವರಪ್ಪ

ಶಿಕಾರಿಪುರದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ, ಸಂಸದ ಶ್ರೀರಾಮುಲು, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಮತ್ತಿತರರು ಇದ್ದರು.

Leave a Reply

error: Content is protected !!