ಗಿಡದಲ್ಲಿ ಅರಳಿತು ಬಲಮುರಿ ಗಣಪತಿಯ ಆಕೃತಿ, ಭಕ್ತರಲ್ಲಿ ಪುಳಕ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಗಿಡದಲ್ಲಿ ಅರಳಿದೆ ಗಜಮುಖನ ಆಕೃತಿ. ಬಲಮುರಿ ಗಣಪನ ಆಕೃತಿ ಕಂಡು ಭಕ್ತರಲ್ಲಿ ಪುಳಕ.

ಹೌದು. ಗಿಡವೊಂದರಲ್ಲಿ ಗಜಮುಖನ ಆಕೃತಿ ಅರಳಿದೆ. ಇದು ಎಲ್ಲರನ್ನು ಪುಳಕಗೊಳಿಸುತ್ತಿದೆ. ಬಲಮುರಿ ಗಣಪನಂತೆಯೇ ಇದೆ ಈ ಆಕೃತಿ.

ಶಿರಾಳಕೊಪ್ಪದಲ್ಲಿ ವಚನಗಾರ್ತಿ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿನ ಸಸ್ಯ ಪ್ರಬೇಧದಲ್ಲಿ ಗಣಪನ ಅಕೃತಿ ಕಾಣಿಸಿಕೊಂಡಿದೆ. ಅಕ್ಕಮಹಾದೇವಿ ಕೋಟೆಯೊಳಗೆ ಈ ಸಸ್ಯವಿದೆ. ಮಹಿಳಾ ವಿವಿಯ ಉದ್ಯೋಗಿಯೊಬ್ಬರ ಕಣ್ಣಿಗೆ ಈ ವಿಶೇಷ ಕಾಣಿಸಿದೆ. ಕೂಡಲೇ ಎಲ್ಲರಿಗೂ ತಿಳಿಸಿದ್ದಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಗಣಪತಿ ಅಕೃತಿ ಕಂಡು ಪುಳಕಿತರಾದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!