ಕಾಡಿನ ಮಧ್ಯೆ ನಾಡ ಬಂದೂಕಿನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಸಾವು

ಶಿವಮೊಗ್ಗ ಲೈವ್.ಕಾಂ | ಸಾಗರ | 15 ಸೆಪ್ಟೆಂಬ್ 2018

ನಾಡ ಬಂದೂಕಿನಿಂದ ಶೂಟ್ ಮಾಡಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೊರೆಗದ್ದೆ ಕಾಡಿನಲ್ಲಿ ಘಟನೆ ನಡೆದಿದೆ.

ಬೆಳಂದೂರಿನ ವರ್ಗೀಸ್ (65) ಆತ್ಮಹತ್ಯೆ ಮಾಡಿಕೊಂಡವರು. ತ್ಯಾಗರ್ತಿ ಸಮೀಪದ ಕಾಡಿನಲ್ಲಿ ಇವತ್ತು ವರ್ಗೀಸ್ ಶೂಟ್ ಮಾಡಿಕೊಂಡಿದ್ದಾರೆ. ಕುತ್ತಿಗೆ  ಭಾಗದಿಂದ ತಲೆಗೆ  ಕಡೆಗೆ ಬಂದೂಕು ಇಟ್ಟುಕೊಂಡು ಫೈರ್ ಮಾಡಿಕೊಂಡಿದ್ದಾರೆ.

ಬಹು ಸಮಯದಿಂದ ವರ್ಗೀಸ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಇನ್ನು, ಎರಡು ವರ್ಷದಿಂದ ವರ್ಗೀಸ್ ಅವರ ಪತ್ನಿ ಮೃತಪಟ್ಟಿದ್ದರು. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!