ಇಂಟರ್’ಸಿಟಿ ರೈಲಿಗೆ ಸಾಗರದಲ್ಲಿ ಭರ್ಜರಿ ಸ್ವಾಗತ, ನಿನ್ನೆಯಿಂದ ಶುರುವಾಗಿದೆ ತಾಳಗುಪ್ಪದವರೆಗೆ ಯಾನ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಅಕ್ಟೋಬರ್ 2018

ಸಾಗರ ರೈಲ್ವೆ ನಿಲ್ದಾಣದಲ್ಲಿ ಸಂಭ್ರಮವೋ ಸಂಭ್ರಮ. ರೈಲು ಬರುತ್ತಿದ್ದಂತೆ ಜನರ ಹರ್ಷೋದ್ಘಾರ. ಮೋದಿ ಪರ ಮೊಳಗಿತು ಘೋಷಣೆ.

ಬೆಂಗಳೂರಿನಿಂದ – ಶಿವಮೊಗ್ಗದವರೆಗಿದ್ದ ಇಂಟರ್’ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ನಿನ್ನೆ ರಾತ್ರಿ ಮೊದಲ ಬಾರಿಗೆ ಇಂಟರ್’ಸಿಟಿ ರೈಲು ತಾಳಗುಪ್ಪದವರೆಗೆ ಪ್ರಯಾಣ ಬೆಳೆಸಿತು. ಸಾಗರ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ, ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು, ಹೋರ್ಷೋದ್ಘಾರ ವ್ಯಕ್ತಪಡಿಸಿದರು. ವಿಶೇಷ ಪೂಜೆ ನೆರವೇರಿಸಿದರು.

ಜನರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಶಾಸಕ ಹರತಾಳು ಹಾಲಪ್ಪ, ರೈಲಿನ ಇಂಜಿನ್’ಗೆ ಹಾರ ಹಾಕಿ ಸ್ವಾಗತಿಸಿದರು. ಇದೇ ಸಂದರ್ಭ ನೆರೆದಿದ್ದವರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!