ಲಿಂಗನಮಕ್ಕಿ ಡ್ಯಾಂನ ಗೇಟ್ ಮತ್ತೆ ಓಪನ್, ಜೋಗ ಜಲಪಾತಕ್ಕೆ ನೀರೋ ನೀರು

ಶಿವಮೊಗ್ಗ ಲೈವ್.ಕಾಂ | ಸಾಗರ

ಲಿಂಗನಮಕ್ಕಿ ಜಲಾಶಯದ ಗೇಟುಗಳನ್ನು ತೆಗೆದು ಪುನಃ ನೀರು ಹೊರಬಿಡಲಾಗುತ್ತಿದೆ. ಹಾಗಾಗಿ ಜೋಗದಲ್ಲಿ ನೀರು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿದೆ.

ಶರಾವತಿ ಹಿನ್ನೀರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಲಿಂಗನಮಕ್ಕಿಯಿಂದ ಸುಮಾರು 70 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಟೂರಿಸ್ಟ್’ಗಳ ಸಂಖ್ಯೆಯೂ ಹೆಚ್ಚು

ಜೋಗ ಜಲಪಾತ ವೀಕ್ಷಣೆಗೆ ಇವತ್ತು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಶಾಲಾ, ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಜೋಗ ಜಲಪಾತದಲ್ಲಿ ನೀರು ಹೆಚ್ಚಾಗಿರುವುದು ಮತ್ತು ವೀಕೆಂಡ್ ಆಗಿರುವುದರಿಂದ ನಾಳೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನೀರಕ್ಷೆಯಿದೆ.

ಇನ್ನು, ಲಿಂಗನಮಕ್ಕಿ ಜಲಾಶಯದ ಗೇಟುಗಳನ್ನು ತೆರೆದು ಹೆಚ್ಚವರಿ ನೀರನ್ನು ಬಿಡಲಾಗಿತ್ತು. ಆದರೆ ಮಳೆ ಕಡಿಮೆಯಾಗಿ, ನೀರಿನ ಒಳಹರಿವು ಇಳೆಕೆಯಾಗಿದ್ದರಿಂದ, ಗೇಟುಗಳನ್ನು ಬಂದ್ ಮಾಡಲಾಗಿತ್ತು. ನಿನ್ನೆಯಿಂದ ಪುನಃ ಒಳಹರಿವು ಹೆಚ್ಚಾಗಿದೆ. ಆದ್ದರಿಂದ ಮತ್ತೆ ಗೇಟ್ ತಗೆಯಲಾಗಿದೆ.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!