ಕರ್ಕಶ ಶಬ್ದದ ಬುಲೆಟ್’ಗಳ ಮೇಲೆ ಮುಂದುವರೆದ ದಾಳಿ, ಸಾಗರದಲ್ಲಿ ಮೂರು ಬುಲೆಟ್ ವಶ

ಶಿವಮೊಗ್ಗ ಲೈವ್.ಕಾಂ | ಸಾಗರ | 02 ಅಕ್ಟೋಬರ್ 2018

ಸೈಲೆನ್ಸರ್ ಬದಲಿಸಿ, ಕರ್ಕಶ ಶಬ್ದ ಮಾಡಿಕೊಂಡು ಸಾಗುವ ಬುಲೆಟ್’ಗಳ ಮೇಲೆ, ಸಾಗರದಲ್ಲಿ ಆರ್’ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಲೀಕರಿಗೆ ದಂಡ ವಿಧಿಸಲಾಗಿದೆ.

ಸಾಗರ ಉಪವಿಭಾಗೀಯ ಸಾರಿಗೆ ಕಚೇರಿ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ, ಕರ್ಕಶ ಶಬ್ದ ಮಾಡುತ್ತ ಸಾಗುತ್ತಿದ್ದ ಮೂರು ಬುಲೆಟ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು, ಸೈಲೆನ್ಸರ್ ಬದಲಿಸಿದ್ದಕ್ಕೆ 3800 ರೂ. ದಂಡ ವಿಧಿಸಲಾಗಿದೆ.

ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿ ದೇವರಾಜ್, ಸಾರಿಗೆ ಇನ್ಸ್’ಪೆಕ್ಟರ್ ವಾಸುದೇವ, ಡಿ.ಜಿ.ಸದಾಶಿವ, ಪೊಲೀಸ್ ಇಲಾಖೆಯ ವೆಂಕಟೇಶ್, ಪ್ರವೀಣ್ ಕುಮಾರ್, ಸುರೇಂದ್ರ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

One Response

  1. Kalyani Shridhar Rao October 3, 2018

Leave a Reply

error: Content is protected !!