ಸೇತುವೆಗೆ ಡಿಕ್ಕಿ ಹೊಡೆದು ಮಗುಚಿಬಿದ್ದ ಟ್ರಾಕ್ಟರ್, ಚಾಲಕ ಸ್ಥಳದಲ್ಲೇ ಸಾವು

ಲೈವ್ ಕರ್ನಾಟಕ.ಕಾಂ | ಆನಂದಪುರ

ಟ್ರಾಕ್ಟರ್ ಉರುಳಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಆನಂದಪುರದಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಹೊಸೂರು ನಂದಿಹೊಳೆ ಸೇತುವೆಯಿಂದ ಟ್ರಾಕ್ಟರ್ ಉರುಳಿಬಿದ್ದಿದೆ.

ಇಂಡುವಳ್ಳಿ ರಜನೀಶ್ (28) ಮೃತ ಟ್ರಾಕ್ಟರ್ ಚಾಲಕ. ರಾಷ್ಟ್ರೀಯ ಹೆದ್ದಾರಿ 206ರ ಚನ್ನಶೆಟ್ಟಿಕೊಪ್ಪದಿಂದ ಹೊಸೂರು ಹೆದ್ದಾರಿ ಕಡೆ ಬರುತ್ತಿದ್ದ ಟ್ರಾಕ್ಟರ್ ಸೇತುವೆಗೆ ಡಿಕ್ಕಿಯಾಗಿ ಕೆಳಗೆ ಉರುಳಿಬಿದ್ದಿದೆ.

ನಂದಿಹೊಳೆ ಸೇತುವೆಯ ಕೆಳಗೆ ಚಾಲಕನ ಮೇಲೆಯೇ ಟ್ರಾಕ್ಟರ್ ಮಗುಚಿ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!