ಭಾರೀ ಮಳೆ, ಗಾಳಿಗೆ ಹೊಸನಗರದಲ್ಲಿ ಕೊಟ್ಟಿಗೆ ಮೇಲೆ ಬಿದ್ದ ತೆಂಗಿನ ಮರ

ಶಿವಮೊಗ್ಗ ಲೈವ್.ಕಾಂ | ಹೊಸನಗರ

ಭಾರೀ ಮಳೆ, ಗಾಳಿಗೆ ತೆಂಗಿನಮರವೊಂದು ಕೊಟ್ಟಿಗೆ ಮೇಲೆ ಬಿದ್ದು, ಛಾವಣಿಯೇ ಮುರಿದು ಬಿದ್ದಿದೆ. ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಾಹ್ಮಣವಾಡ ಗ್ರಾಮದಲ್ಲಿ ನಡೆದಿದೆ.

ದಿವಾಕರ್ ಎಂಬುವವರ ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಇನ್ನು, ಮರ ಬಿದ್ದಿದ್ದರಿಂದ ಕೊಟ್ಟಿಗೆ ಸಂಪೂರ್ಣ ಹಾಳಾಗಿದೆ. ಇದರಿಂದ ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!