ಹೊಸನಗರದಲ್ಲೂ ಪುನರ್ವಸು ಮಳೆ ಅಬ್ಬರ, ಕೃಷಿ ಚಟುವಟಿಕೆ ಜೋರು, ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಸುರಿದಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಹೊಸನಗರ

ತಾಲೂಕಿನಾದ್ಯಂತ ಪುನರ್ವಸು ಮಳೆಯ ಅಬ್ಬರ ಜೋರಾಗಿದೆ. ಇವತ್ತು ಕೂಡ ವರುಣ ಅಬ್ಬರಿಸುತ್ತಿದ್ದಾನೆ. ಯಡೂರು, ಮಾನಿ, ಹುಲಿಕಲ್, ಮಾಸ್ತಿಕಟ್ಟೆ, ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಜನ ಮನೆ ಬಿಟ್ಟು ಹೊರಬಾರಲಾಗದಷ್ಟು ಮಳೆ ಸುರಿಯುತ್ತಿದೆ.

ಮಾಣಿ ಅಣೆಕಟ್ಟೆಯ ಒಳಹರಿವು ಹೆಚ್ಚಳ

ಭಾರೀ ಮಳೆಯಾಗುತ್ತಿರುವುದರಿಂದ ಮಾಣಿ ಅಣೆಕಟ್ಟೆಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಅಣೆಕಟ್ಟೆಯಲ್ಲಿ 5965 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹಾಗಾಗಿ ಅಣೆಕಟ್ಟೆಯಲ್ಲಿನ ನೀರಿನ ಮಟ್ಟ 582.84 ಮೀ.ಗೆ ಹೆಚ್ಚಳವಾಗಿದೆ.

ಕೃಷಿ ಚಟುವಟಿಕೆ ಜೋರು

ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ, ಹಳ್ಳ, ಕೊಳ್ಳಗಳು ಭರ್ತಿಯಾಗಿವೆ. ಅಷ್ಟೇ ಅಲ್ಲಾ, ಕೃಷಿ ಚಟುವಟಿಕೆಯೂ ಬಿರುಸು ಪಡೆದುಕೊಂಡಿದೆ. ಭತ್ತದ ಬೆಳೆ ಜೋರಾಗಿದೆ. ಇನ್ನು, ನಿರಂತರ ಮಳೆಯಿಂದಾಗಿ ಅಡಕೆ ಬೆಳೆಗಾರರು ಆತಂಕಗೊಂಡಿದ್ದಾರೆ. ಅಡಕೆಗೆ ನೀರುಗೊಳೆ ರೋಗದ ಆತಂಕ ಶುರುವಾಗಿದೆ.

ತಾಲೂಕಿನಾದ್ಯಂತ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?

ಬೆಳಗ್ಗೆ 8 ಗಂಟೆಯ ಅಂತ್ಯಕ್ಕೆ ನಗರದಲ್ಲಿ 128 ಮಿ.ಮೀ ಮಳೆಯಾಗಿದೆ. ಅಂಡಗದೂದೂರು 84.50 ಮಿ.ಮೀ, ರಾಮಚಂದ್ರಾಪುರ 72.50 ಮಿ.ಮೀ, ಹುಂಚಾ 65.50, ಸೊನಾಲೆ 68.50 ಮಿ.ಮೀ, ತ್ರಿಣಿವೆ 68.50 ಮಿ.ಮೀ, ಮತ್ತೆಮನೆ 65.80 ಮಿ.ಮೀ, ಯಡೂರು 68.50 ಮಿ.ಮೀ, ಸುಳಗೋಡು 77.50 ಮಿ.ಮೀ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!