12 ವರ್ಷದ ಬಳಿಕ ಹೊಸನಗರ ಮಾಣಿ ಡ್ಯಾಂ ಫುಲ್, ಮೂರು ಕ್ರಸ್ಟ್ ಗೇಟ್ ಓಪನ್

ಶಿವಮೊಗ್ಗ ಲೈವ್.ಕಾಂ | ಹೊಸನಗರ | 25 Aug 2018

ನಿರಂತರ ಮಳೆಯಿಂದಾಗಿ ಮಾಣಿ ಜಲಾಶಯವು ಭರ್ತಿಯಾಗಿದೆ. ಮೂರು ಗೇಟುಗಳನ್ನು ತೆಗೆದು ಡ್ಯಾಂನಿಂದ ನೀರು ಹೊರಡಬಿಡಲಾಗುತ್ತಿದೆ.

ಶುಕ್ರವಾರ ಸಂಜೆ ಜಲಾಶಯದ ಮೂರು ಕ್ರಸ್ಟ್ ಗೇಟ್’ಗಳನ್ನು ತೆಗೆದು ನೀರು ಹೊರಬಿಡಲಾಯಿತು. ಸುಮಾರು 1100 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 594.36 ಅಡಿ ಇದೆ. ಈಗ 594.16 ಅಡಿ ನೀರಿದೆ. ಇನ್ನು, 12 ವರ್ಷದ ಹಿಂದೆ, ಅಂದರೆ 2006ರಲ್ಲಿ ಮಾಣಿ ಜಲಾಶಯ ಭರ್ತಿಯಾಗಿತ್ತು. ಆಗ ಮೂರು ಗೇಟ್ ತೆಗೆದು ನೀರು ಹೊರ ಬಿಡಲಾಗಿತ್ತು. ಈಗ ಮತ್ತೆ ಭರ್ತಿ ಆಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!