ಸಾಗರ, ಹೊಸನಗರದಲ್ಲಿ ಮಳೆ ಜೋರು, ಇವತ್ತು ಯಾವ್ಯಾವ ಊರಲ್ಲಿ ಎಷ್ಟೆಷ್ಟು ಮಳೆಯಾಗಿದೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಸಾಗರ / ಹೊಸನಗರ

ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಅದರಲ್ಲೂ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಎರಡೂ ತಾಲೂಕಿನಲ್ಲಿ ರಾತ್ರಿಯೂ ಮಳೆಯಾಗಿದೆ. ಹಾಗಾಗಿ ಹಳ್ಳಕೊಳ್ಳ, ಕೆರಗಳು ತುಂಬಿ ಹರಿಯುತ್ತಿವೆ.

ಹೊಸನಗರದಲ್ಲಿ ವರುಣನ ಆರ್ಭಟ

ಹೊಸನಗರ ಭಾಗದಲ್ಲಿ ತುಂಬಾ ಮಳೆಯಾಗುತ್ತಿದೆ. ಮಾಸೂರು, ಸುಳಗೋಡು, ಯಡೂರು, ಕೈರಕುಂಡ, ನಗರ, ಕರಿಮನೆ ಭಾಗದಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗಿದೆ.

ಮಾಸುರಿನಲ್ಲಿ 129 ಮಿ.ಮೀ, ಸುಳಗೋಡಿನಲ್ಲಿ 65 ಮಿ.ಮೀ, ಯಡೂರಿನಲ್ಲಿ 98 ಮಿ.ಮೀ ಮಳೆ ದಾಖಲಾಗಿದೆ.

ಸಾಗರದಲ್ಲೂ ಬ್ರೇಕ್ ನೀಡದ ಮಳೆ

ಸಾಗರ ತಾಲೂಕಿನ ವಿವಿಧೆಡೆಯೂ ವಿಪರೀತ ಮಳೆಯಾಗುತ್ತಿದೆ. ಮಾಸೂರು, ಹಿರೇನೆಲ್ಲೂರು, ಕೆಳದಿಯಲ್ಲಿ 66 ಮಿ.ಮೀ ಮಳೆಯಾಗಿದೆ. ಅರಳಗೋಡು, ಸೈದೂರು, ಕನಲೆಯಲ್ಲಿ 65 ಮಿ.ಮೀ ಮಳೆಯಾಗಿರುವ ವರದಿಯಿದೆ.

ನಾಲ್ಕು ದಿನದಿಂದ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!