ಹೊಸನಗರ, ಸಾಗರದಲ್ಲಿ ನಿಂತೇ ಇಲ್ಲ ಮಳೆ, ಗೋಡೆ ಕುಸಿದು ಮಹಿಳೆ ಸಾವು, ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?

ಶಿವಮೊಗ್ಗ ಲೈವ್.ಕಾಂ | ಸಾಗರ / ಹೊಸನಗರ

ಸಾಗರ ಮತ್ತು ಹೊಸನಗರ ಭಾಗದಲ್ಲಿ ಮಳೆ ಮುಂದುವರೆದಿದೆ. ಕೆಲವು ಕಡೆ ಸ್ವಲ್ಪ ಬಿಡುವು ನೀಡುತ್ತಿರುವ ವರುಣ, ಪುನಃ ಆರ್ಭಟಿಸುತ್ತಿದ್ದಾನೆ. ಇವತ್ತು ಕೂಡ ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಭಾರೀ ಮಳೆ ದಾಖಲಾಗಿದೆ.

ಗೋಡೆ ಕುಸಿದು ಮಹಿಳೆ ಸಾವು

ಸಾಗರ ತಾಲೂಕಿನ ಬೆಳಲಮಕ್ಕಿಯಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಕಲ್ಲಮ್ಮ (65) ಮೃತ ಮಹಿಳೆ. ಈ ಸಂಬಂಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರದಾದ್ಯಂತ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಅರಳಗೋಡು 125.50 ಮಿ.ಮೀ, ಮಾಳ್ವೆ 67.50 ಮಿ.ಮೀ, ಕರೌರು 83.50 ಮಿ.ಮೀ, ಕಲ್ಮನೆ 66 ಮಿ.ಮೀ, ಯಡಜಿಗಳಿಮನೆ 64.50 ಮಿ.ಮೀ, ಕಾಂಡಿಕ 64.50 ಮಿ.ಮೀ, ಸೈದೂರು 66 ಮಿ.ಮೀ, ಕನಲೆ 65 ಮಿ.ಮೀ, ಕೆಳದಿ 71 ಮಿ.ಮೀ,.

ಹೊಸನಗರ ತಾಲೂಕಿನಲ್ಲಿ ಎಷ್ಟೆಷ್ಟು ಮಳೆಯಾಗಿದೆ?

ಯಡೂರು 167 ಮಿ.ಮೀ, ಕೈರಕುಂಡ 125 ಮಿ.ಮೀ, ಮತ್ತೆಮನೆ 94.40 ಮಿ.ಮೀ, ನಗರ 124.50 ಮಿ.ಮೀ, ಹೊಸೂರು (ಸಂಪೆಕಟ್ಟೆ) 75 ಮಿ.ಮೀ, ಮೇಲಿನಬೇಸಿಗೆ 64 ಮಿ.ಮೀ, ಹುಂಚ 70.50 ಮಿ.ಮೀ, ತ್ರಿಣಿವೆ 73.50 ಮಿ.ಮೀ, ರಾಮಚಂದ್ರಾಪುರ 72.50 ಮಿ.ಮೀ,.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!