ಹೊಸನಗರದಲ್ಲಿ ಅಬಕಾರಿ ಅಧಿಕಾರಿಗಳ ರೇಡ್, ಕೆಜಿಗಟ್ಟಲೆ ಗಾಂಜಾ ಸೀಸ್, ಇದರ ಮೌಲ್ಯ ಎಷ್ಟು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಹೊಸನಗರ | 04 ಅಕ್ಟೋಬರ್ 2018

ಖಚಿತ ಮಾಹಿತಿ ಮೇರೆಗೆ ಹೊಸನಗರ ತಾಲೂಕಿನ ಹಳ್ಳಿಯೊಂದರಲ್ಲಿ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಒಂದು ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊಸನಗರದ ಕಗಚಿ ಗ್ರಾಮದ ಸುಳಗೋಡು ಹೊರವಲಯದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕೃಷ್ಣಮೂರ್ತಿ ಮತ್ತು ಐಗಮ್ಮ ಎಂಬುವವರ ಜಮೀನಿನಲ್ಲಿ ಗಾಂಜಾ ಬೆಳೆಯಲಾಗಿತ್ತು. ಸುಮಾರು 34 ಕೆ.ಜಿ.ಯ 19 ತೆನೆಭರಿತ  ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೊತ್ತ ಸುಮಾರು ಒಂದು ಲಕ್ಷ ರೂ. ಅಂತಾ ಅಂದಾಜು ಮಾಡಲಾಗಿದೆ.

ಅಬಕಾರಿ ಉಪ ಆಯುಕ್ತ ವೈ.ಆರ್.ಮೋಹನ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!