ಹೆಂಡತಿ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪೊಲೀಸ್, ಭದ್ರಾವತಿಯಲ್ಲಿ ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 26 ಸೆಪ್ಟೆಂಬರ್ 2018

ಮತ್ತೊಬ್ಬ ಯುವತಿಯನ್ನು ಮದುವೆಯಾಗುವ ಸಲುವಾಗಿ, ಹೆಂಡತಿ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪೊಲೀಸ್, ಜೈಲು ಸೇರಿದ್ದಾನೆ. ಸುಪಾರಿ ಪಡೆದವನೇ ಪೊಲೀಸರ ಮುಂದೆ ಶರಣಾಗಿ ವಿಚಾರ ಬಾಯಿಬಿಟ್ಟಿದ್ದರಿಂದ, ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ? ಅರೆಸ್ಟ್ ಆದ ಪೊಲೀಸ್ ಯಾರು?

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್’ಟೇಬಲ್ ರವೀಂದ್ರ ಗಿರಿ, ಒಂಭತ್ತು ವರ್ಷದ ಹಿಂದೆ ದಾವಣಗೆರೆಯ ಅನಿತಾ ಜೊತೆ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಾಲ್ಕೈದು ವರ್ಷದಿಂದ ರವೀಂದ್ರ ಗಿರಿಗೆ ಯುವತಿಯೊಬ್ಬಳ ಜೊತೆಗೆ ಪ್ರೇಮಾಂಕುರವಾಗಿ, ಮದುವೆಯಾಗಲು ನಿರ್ಧರಿಸಿದ್ದ. ಇದೇ ಕಾರಣಕ್ಕೆ ಪತ್ನಿ ಅನಿತಾಳ ಹತ್ಯೆಗೆ ರವೀಂದ್ರ ಗಿರಿ ಯೋಚಿಸಿದ್ದ. ಶಿವಮೊಗ್ಗ ಮೂಲದ ಮೂವರಿಗೆ ಸಪಾರಿ ಕೊಟ್ಟಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ.

CAR FOR SALE | ಉತ್ತಮ ಕಂಡೀಷನ್’ನಲ್ಲಿರುವ ಕಾರು ಶಿವಮೊಗ್ಗದಲ್ಲಿ ಮಾರಾಟಕ್ಕಿದೆ

ಹೆಂಡತಿ ಹತ್ಯೆಗೆ ಲಕ್ಷ ಲಕ್ಷ ಸುರಿಯಲು ರೆಡಿಯಾಗಿದ್ದ

ರವೀಂದ್ರ ಗಿರಿ ತನ್ನ ಪತ್ನಿ ಹತ್ಯೆಗೆ ಲಕ್ಷ ಲಕ್ಷ ಸುರಿಯಲು ರೆಡಿಯಾಗಿದ್ದ. ಶಿವಮೊಗ್ಗ ಮೂಲದ ಮೂವರಿಗೆ ಐದು ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದ ಅಂತಾ ಹೇಳಲಾಗುತ್ತಿದೆ. ಇನ್ನು, ಸುಪಾರಿ ಹಂತಕರು ಅನಿತಾ ಹತ್ಯೆಗೆ ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಅವರ ಪ್ಲಾನ್’ಗಳು ಫೇಲ್ ಆಗಿದ್ದವು. ಅಷ್ಟರಲ್ಲಿ ಸುಪಾರಿ ಪಡೆದ ಮೂವರ ಪೈಕಿ ಒಬ್ಬಾತ ಕೃತ್ಯದಿಂದ ಹಿಂದೆ ಸರಿಯಲು ಯೋಜಿಸಿದ್ದ. ಕೊನೆಗೆ ಆತನೇ ಪೊಲೀಸರಿಗೆ ಶರಣಾಗಿ, ಇಡೀ ವಿಚಾರ ಬಾಯಿಬಿಟ್ಟಿದ್ದ.

ಪುಟ್ಟ ಪುಟ್ಟ ಮಕ್ಕಳಿಂದ ಉಳಿಯಿತು ಪ್ರಾಣ

ಅನಿತಾ ಹತ್ಯೆಗೆ ತೆರಳಿದ್ದ ಸುಪಾರಿ ಹಂತಕರಿಗೆ, ಆಕೆಯ ಜೊತೆಗೆ ಪುಟ್ಟ ಪುಟ್ಟ ಮಕ್ಕಳಿರುವುದು ಕಂಡಿತ್ತು. ಮಕ್ಕಳನ್ನು ನೋಡಿದ ಹಂತಕನೊಬ್ಬ ಮನಸು ಬದಲಿಸಿದ್ದ. ಸುಪಾರಿಯಿಂದ ಹಿಂದೆ ಸರಿಯುವುದಾಗಿಯೂ ತಿಳಿಸಿದ್ದ. ಆದರೆ ಉಳಿದ ಇಬ್ಬರು ಹಂತಕರು, ಅನಿತಾಳ ಹತ್ಯೆ ಮಾಡಬಹುದು ಎಂಬ ಗುಮಾನಿಯ ಹಿನ್ನೆಲೆ, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರಿಗೆ ವಿಷಯ ತಿಳಿಸಿ, ಶರಣಾಗಿದ್ದ. ಕೊನೆಗೆ ಜಿಲ್ಲಾ ರಕ್ಷಣಾಧಿಕಾರಿ ಅವರ ನಿರ್ದೇಶನದ ಮೇರೆಗೆ, ರವೀಂದ್ರಗಿರಿಯನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇನ್ನು, ಸುಪಾರಿ ಪಡೆದಿದ್ದ ಫೈರೋಜ್ ಖಾನ್, ಸಯ್ಯದ್ ಇರ್ಫಾನ್, ಸುಹೇಲ್’ನನ್ನು ನ್ಯೂ  ಟೌನ್ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!