ನಿಟ್ಟುಸಿರು ಬಿಟ್ಟರು ಭದ್ರಾವತಿ ಎಂಪಿಎಂ ಕಾರ್ಖಾನೆಯಿಂದ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರು

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 23 ಸೆಪ್ಟೆಂಬರ್ 2018

ಮೈಸೂರು ಕಾಗದ ಕಾರ್ಖಾನೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದ ಕಾರ್ಮಿಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ವಿಆರ್’ಎಸ್ ಮತ್ತು ವಿಎಸ್ಎಸ್ ಯೋಜನೆ ಅಡಿ ಬರಬೇಕಿದ್ದ ಎರಡನೇ ಕಂತಿನ ಹಣ ಬಿಡುಗಡೆಯಾಗಿದೆ. ಕೊನೆಗೂ 143.50 ಕೋಟಿ ರೂ. ಹಣ ಕಾರ್ಮಿಕರ ಕೈ ಸೇರಿದೆ.

CAR FOR SALE | ಉತ್ತಮ ಕಂಡೀಷನ್’ನಲ್ಲಿರುವ ಕಾರು ಶಿವಮೊಗ್ಗದಲ್ಲಿ ಮಾರಾಟಕ್ಕಿದೆ

ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ 345.63 ಕೋಟಿ ರೂ. ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಮೊದಲ ಹಂತದಲ್ಲಿ 202.1 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡಗಡೆ ಮಾಡಿತ್ತು. ಬಾಕಿ ಮೊತ್ತ ರಿಲೀಸ್ ಮಾಡುವ ಹೊತ್ತಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ಹಾಗಾಗಿ ಎರಡನೇ ಕಂತು ವಿಳಂಬವಾಗಿ, ಕಾರ್ಮಿಕರ ಕೈ ಸೇರಿದೆ.

ಎಂಪಿಎಂ ಕಾರ್ಖಾನೆ ಸ್ಥಾಗಿತಗೊಂಡು ಮೂರು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಶೇ.90ರಷ್ಟು ಕಾರ್ಮಿಕರಿಂದ ಸ್ವಯಂ ನಿವೃತ್ತಿಗೊಳಿಸಲಾಗಿತ್ತು. ಅವರಿಗೆ ಬಾಕಿ ಮೊತ್ತ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಅದರಂತೆ ಈಗ ಹಣ ಬಿಡುಗಡೆ ಮಾಡಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!