ಭದ್ರಾ ಡ್ಯಾಂ ಮುಂದೆ KRS ಮಾದರಿ ಪಾರ್ಕ್, ಪ್ರವಾಸೋದ್ಯಮ ಸಚಿವರಿಂದಲೇ ಸ್ಪಾಟ್ ವಿಸಿಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 24 ಸೆಪ್ಟೆಂಬರ್ 2018

ಕೊನೆಗೂ ಭದ್ರಾ ಜಲಾಶಯದ ಮುಂದೆ, KRS ಮಾದರಿ ಉದ್ಯಾನವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರಿದೆ. ಇದೇ ಕಾರಣಕ್ಕೆ ಪ್ರವಾಸೋದ್ಯಮ ಸಚಿವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದರು. ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಅವರು, ಜಲಾಶಯದ ಮುಂದೆ 185 ಎಕರೆ ಜಾಗ ಖಾಲಿ ಇದೆ. ಈ ಪೈಕಿ 105 ಎಕರೆಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗುತ್ತದೆ ಎಂದರು.

CLICK HERE FOR ADVT | ಉತ್ತಮ ಕಂಡೀಷನ್’ನಲ್ಲಿರುವ ಕಾರು ಶಿವಮೊಗ್ಗದಲ್ಲಿ ಮಾರಾಟಕ್ಕಿದೆ

ಭದ್ರಾ ಜಲಾಶಯದ ಸುತ್ತಮುತ್ತನ ಪ್ರದೇಶ ಅಭಿವೃದ್ಧಿಗೆ 13 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ಅನುದಾನ ಬಳಸಿಕೊಂಡು 8 ರಿಂದ 10 ತಿಂಗಳ ಒಳಗಾಗಿ ಉದ್ದೇಶಿತ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಭದ್ರಾವತಿ ಶಾಸಕ ಸಂಗಮೇಶ್ವರ, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ.ಯೋಗೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!