ಭದ್ರಾವತಿಯಲ್ಲಿ ಇವತ್ತು ಖಾಕಿ ಸರ್ಪಗಾವಲು, ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ| 21 ಸೆಪ್ಟೆಂಬರ್ 2018

ಭದ್ರಾವತಿಯಲ್ಲಿ ಹಿಂದೂ ಮಹಾಸಭಾದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ವಿಸರ್ಜನೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಭದ್ರಾವತಿಯ ಹೊಸಮನೆಯಲ್ಲಿ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರಸೇನಾ ಸಮಿತಿ ವತಿಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಫುಲ್ ಬಂದೋಬಸ್ತ್, ಅರೆ ಸೇನಾ ಪಡೆ ನಿಯೋಜನೆ

ಮೆರವಣಿಗೆ ವೇಳೆ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಅರೆಸೇನಾ ಪಡೆ ಮತ್ತು ಪೊಲೀಸರು ಸೇರಿ ಒಟ್ಟು ಎರಡು ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಸ್.ಪಿ, ಮೂರು ಹೆಚ್ಚುವರಿ ರಕ್ಷಣಾಧಿಕಾರಿ, ಆರು ಡಿವೈಎಸ್ಪಿ, 13 ಸಿಪಿಐ, 22 ಪಿಎಸ್ಐ, 65 ಎಎಸ್ಐ, 200 ತರಬೇತಿ ನಿರತ ಪಿಎಸ್ಐ, 800 ಪೊಲೀಸ್ ಸಿಬ್ಬಂದಿ, 250 ಗೃಹ ರಕ್ಷಕ ದಳ, 7 ಕೆಎಸ್ಆರ್’ಪಿ, 8 ಡಿಎಆರ್ ತುಕಡಿ, ನಕ್ಸಲ್ ನಿಗ್ರಹ ಪಡೆಯ 2 ತುಕಡಿ, ಆರ್’ಎಎಫ್, ಕ್ಷಿಪ್ರ ಕಾರ್ಯಪಡೆಯ ತಲಾ ಒಂದು ತುಕಡಿ, ಮಫ್ತಿಯಲ್ಲಿ 50 ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲೆಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು

ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 120 ಸಿಸಿ ಕ್ಯಾಮರಾಗಳಿದ್ದು, ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರನ್ನು ಇವು ಸೆರೆ ಹಿಡಿಯಲಿವೆ. ಇಡೀ ಮೆರವಣಿಗೆಯ ಚಿತ್ರೀಕರಣಕ್ಕೆ 75 ವಿಡಿಯೋಗ್ರಾಫರ್’ಗಳನ್ನು ನಿಯೋಜಿಸಲಾಗುತ್ತಿದೆ. ಇನ್ನು, ಗಸ್ತು ತಿರುಗಲು 20 ಚೀತಾ ವಾಹನಗಳು, 8 ಜೀಪ್’ಗಳು ಕಾರ್ಯ ನಿರ್ವಹಿಸಲಿವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!