LIVE REPORT | ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ, ಎಲ್ಲೆಲ್ಲೂ ರಾರಾಜಿಸುತ್ತಿದೆ ಕೇಸರಿ ಧ್ವಜ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ| 21 ಸೆಪ್ಟೆಂಬರ್ 2018

ಹಿಂದೂ ಮಹಾಸಭಾದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ಅದ್ಧೂರಿ ಮೆರವಣಿಗೆ ಆರಂಭವಾಗಿದೆ. ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದಾರೆ. ಭದ್ರಾವತಿ ಸಿಟಿಯಾದ್ಯಂತ ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ.

ಹೊಸಮನೆಯಿಂದ ಮೆರವಣಿಗೆ ಆರಂಭವಾಗಿದೆ. ಹುತ್ತಾ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಮಾಧವಾಚಾರ್ ಸರ್ಕಲ್ ಬಳಿ ಭದ್ರಾ ನದಿಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಗುತ್ತದೆ.

ಎಲ್ಲಲ್ಲೂ ಜನವೋ ಜನ, ಸಿಟಿ ಫುಲ್ ಕೇಸರಿಮಯ

ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಜನವೋ ಜನ ಸೇರಿದ್ದಾರೆ. ರೆಸ್ತೆಯ ಎರಡೂ ಬದಿಯಲ್ಲೂ ಜನ ಗಣಪತಿ ಮೂರ್ತಿ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಇನ್ನು, ಡೊಳ್ಳು, ಮೈಕ್ ಮೂಲಕ ಹಾಕುತ್ತಿರುವ ಹಾಡುಗಳಿಗೆ ಯುವಕರು ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಭದ್ರಾವತಿ ಸಿಟಿಯಾದ್ಯಂತ ಕೇಸರಿ ಧ್ವಜ, ಶಾಲುಗಳು ರಾರಾಜಿಸುತ್ತಿವೆ. ಯುವಕರು ಕೇಸರಿ ಧ್ವಜವನ್ನು ತಿರುಗಿಸುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ.

ಬಿಗಿ ಬಂದೋಬಸ್ತ್, ಎಸ್.ಪಿಯದ್ದೇ ನೇತೃತ್ವ

ಸಿಟಿಯಾದ್ಯಂತ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಭದ್ರತೆಯ ಉಸ್ತುವಾರಿ ಹೊತ್ತಿದ್ದಾರೆ. ಬೆಳಗ್ಗೆಯಿಂದ ನಗರದ ವಿವಿಧೆಡೆ ಭದ್ರತೆಯ ಪರಿಶೀಲನೆ ನಡೆಸಿದರು.

ಗುಪ್ತಚರ ಇಲಾಖೆ ಐಜಿಪಿ ದಯಾನಂದ್ ಕೂಡ ಭದ್ರಾವತಿಗೆ ಆಗಮಿಸಿದ್ದಾರೆ. ಪರಿಸ್ಥಿತಿಯ ಅವಲೋಕನ ನಡೆಸಿದ ಅವರು ವಿವಿಧ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!