ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಧರೆಗುರುಳಿದ ಮರಗಳು, ಅಲ್ಲಲ್ಲಿ ಪವರ್ ಕಟ್

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 28 ಸೆಪ್ಟೆಂಬರ್ 2018

ಭಾರೀ ಮಳೆಯಿಂದಾಗಿ ಭದ್ರಾವತಿ ಫುಲ್ ಕೂಲ್ ಆಗಿದೆ. ಇನ್ನು,  ಮಳೆ ಜೊತೆಗೆ ಗುಡುಗು ಮತ್ತು ವಿಪರೀತ ಗಾಳಿ ಬೀಸಿದ್ದರಿಂದ, ವಿವಿಧೆಡೆ ಮರಗಳು ಧರೆಗುರುಳಿವೆ.

ಭದ್ರಾವತಿಯಲ್ಲಿ ಇವತ್ತು ಮಧ್ಯಾಹ್ನದಿಂದ ಮಳೆಯಾಗುತ್ತಿದೆ. ಮಧ್ಯಾಹ್ನ ಭಾರೀ ಗಾಳಿ ಸಹಿತ ಮಳೆಯಾಗಿದೆ. ಇದರಿಂದ ಹುಡ್ಕೋ ಸರ್ಕಲ್ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿವೆ. ತಾಲೂಕಿನ ವಿವಿಧೆಡೆಯೂ ಮಳೆಯಾಗಿದೆ.

ಭದ್ರಾವತಿ ಕೂಲ್ ಕೂಲ್

ಭಾರೀ ಬಿಸಿಲಿನಿಂದ ಭದ್ರಾವತಿ ಜನರು ಹೈರಾಣಾಗಿದ್ದರು. ಆದರೆ ಇವತ್ತು ಸುರಿದ ಮಳೆ ಕೂಲ್ ಕೂಲ್ ವಾತಾರಣ ಸೃಷ್ಟಿಸಿದೆ. ಇನ್ನು, ಮಳೆ ಬರುತ್ತಿದ್ದಂತೆ, ವಿವಿಧೆಡೆ ವಿದ್ಯುತ್ ವ್ಯತ್ಯೆಯವಾಗಿದೆ.

ಸಹ್ಯಾದ್ರಿ ಉತ್ಸವಕ್ಕೂ ಮಳೆ ಅಡ್ಡಿ

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಿನ್ನೆಯಿಂದ ಸಹ್ಯಾದ್ರಿ ಉತ್ಸವ ನಡೆಯುತ್ತಿದೆ. ಮೂರು ದಿನದ ಉತ್ಸವಕ್ಕೆ ಇವತ್ತು ಮಳೆ ಅಡ್ಡಿ ಉಂಟು ಮಾಡಿದೆ. ಭಾರೀ ಮಳೆಯಿಂದಾಗಿ ಕುವೆಂಪು ವಿವಿಯಲ್ಲಿ ವಿದ್ಯುತ್ ವ್ಯತ್ಯೆಯವಾಗಿತ್ತು.

PC | Shabari Vasan

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!