ಭದ್ರಾವತಿಯಲ್ಲಿ ಓಸಿ ಮಟ್ಕಾ ಅಡ್ಡೆ ಮೇಲೆ ಪೊಲೀಸರ ರೇಡ್, ಒಬ್ಬನ ಅರೆಸ್ಟ್, 1.76 ಲಕ್ಷ ಸೀಸ್

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 19 ಸೆಪ್ಟೆಂಬರ್ 2018

ಓಸಿ ಮಟ್ಕಾ ಅಡ್ಡೆ ಮೇಲೆ ಭದ್ರಾವತಿ ಪೊಲೀಸರು ದಾಳಿ ಮಾಡಿದ್ದಾರೆ. ಒಬ್ಬನನ್ನು ಬಂಧಿಸಿದ್ದು, ಜೂಜಾಟಕ್ಕೆ ಬಳಸಿದ್ದ 1.76 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿಯ ಕೂಲಿ ಬ್ಲಾಕ್’ನ ಮನೆಯೊಂದರಲ್ಲಿ ಓಸಿ ಮಟ್ಕಾ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ನಸೀರ್ ಎಂಬಾತನನ್ನು ಬಂಧಿಸಿದ್ದಾರೆ.

ಭದ್ರಾವತಿ ನಗರ ಸಿಪಿಐ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!