ವಿನೋಬನಗರದ ಯಡಿಯೂರಪ್ಪ ಮನೆ ಮುತ್ತಿಗೆಗೆ ಯತ್ನಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಮಹದಾಯಿ ನೀರು ಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚಬೇಕು, ರೈತರ ಸಾಲ ಮನ್ನಾ ಮಾಡಬೇಕು, ಉದ್ಯೋಗ ಸೃಷ್ಟಿಸಬೇಕು ಎಂದು ಆಗ್ರಹಿಸಿ ವಿನೋಬನಗರದಲ್ಲಿರುವ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | ಬೆಳ್ಳಂಬೆಳಗ್ಗೆ ವಿನೋಬನಗರದ ಯಡಿಯೂರಪ್ಪ ಮನೆಗೆ ಯುವ ಕಾಂಗ್ರೆಸಿಗರ ಮುತ್ತಿಗೆ

ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ, ವಿನೋಬನಗರದ ಯಡಿಯೂರಪ್ಪ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದರು. ಮುತ್ತಿಗೆ ಹಾಕಲು ಬಂದ ಸಂದರ್ಭ, ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ನೂಕಾಟ ತಳ್ಳಾಟ ಆಯ್ತು. ಈ ವೇಳೆ ಕೆಲ ಕಾರ್ಯಕರ್ತರಿಗೆ ಗಾಯವಾಗಿದೆ. ಉಸಿರಾಟದ ಸಮಸ್ಯೆ ಎದುರಾಗಿದೆ.

ಗಾಯಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಲೈವ್ ಕರ್ನಾಟಕ ವಾಟ್ಸಪ್ | 7411700200

(ವಾಟ್ಸಪ್ ಮಾಡಿ, ಶಿವಮೊಗ್ಗದ ನ್ಯೂಸ್ ಪಡೆಯಿರಿ. ನಾವು ವಾಟ್ಸಪ್ ಗ್ರೂಪ್ ಮಾಡುವುದಿಲ್ಲ. ನಿಮಗೆ ಪ್ರತ್ಯೆಕವಾಗಿ ನ್ಯೂಸ್ ಕಳುಹಿಸುತ್ತೇವೆ. ಇನ್ನು, ನಿಮ್ಮೂರಿನ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನ್ಯೂಸ್ ಆಗುವಂತಹ ಘಟನೆಗಳಿದ್ದರೆ, ಕೂಡಲೇ ನಮಗೆ ವಾಟ್ಸಪ್ ಮಾಡಿ. ಸುಳ್ ಸುದ್ದಿಗಳನ್ನು ಕಳುಹಿಸಬೇಡಿ, ನಾವು ಅಂತಹ ಸುದ್ದಿ ಪ್ರಕಟಿಸುವುದಿಲ್ಲ)

Leave a Reply

error: Content is protected !!