ಆಲ್ಕೊಳ ಬಳಿ ಸಾಗರ ರಸ್ತೆಯಲ್ಲಿ ಟ್ರಾಕ್ಟರ್ ಮೇಲೆ ಬಿತ್ತು ಮರ, ಅದೃಷ್ಟವಶಾತ್ ಉಳಿಯಿತು ಡ್ರೈವರ್ ಜೀವ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 28 ಸೆಪ್ಟೆಂಬರ್ 2018

ಧರೆಗುರುಳಿದ ಮರ.. ಅದೃಷ್ಟವಶಾತ್ ಉಳಿಯಿತು ಹಲವರ ಜೀವ.. ಸಾಗರ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯೆಯ.

ಆಲ್ಕೋಳ ಸರ್ಕಲ್ ಬಳಿ, ಸಾಗರ ರಸ್ತೆಯಲ್ಲಿ ಮರ ಧರೆಗುರುಳಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಮೇಲೆ ಮರ ಉರುಳಿದೆ. ಚಾಲಕ ಟ್ರಾಕ್ಟರನ್ನು ನಿಲ್ಲಿಸಿ, ಊಟಕ್ಕೆ ತೆರಳಿದ್ದ. ಇದರಿಂದ ಅದೃಷ್ಟವಶಾತ್ ಆತನ ಪ್ರಾಣ ಉಳಿದಿದೆ. ಇನ್ನು, ಸಾಗರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಮರ ಉರುಳುವ ಸಂದರ್ಭ ಯಾವುದೇ ವಾಹನಗಳು ಆ ಭಾಗದಲ್ಲಿ ಇರಲಿಲ್ಲ.

ಸಾಗರ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಗುಂಡಿ ತೆಗೆಯಲಾಗಿದೆ. ಮರದ ಪಕ್ಕದಲ್ಲೇ ಗುಂಡಿ ತೋಡಲಾಗಿದೆ. ಇದೇ ಕಾರಣಕ್ಕೆ ಮರ ಧರೆಗುರುಳಿರುವ ಸಾಧ್ಯತೆ ಇದೆ ಅಂತಾ ಸ್ಥಳೀಯರು ಆರೋಪಿಸುತ್ತಾರೆ. ಇನ್ನು, ಮರ ಉರುಳಿದ್ದರಿಂದ ಅದರ ತೆರವು ಕಾರ್ಯಾಚರಣೆ ನಡೆಯುವವರೆಗೆ ವಾಹನಗಳು ಅನ್ಯ ಮಾರ್ಗದಲ್ಲಿ ತೆರಳುವಂತೆ ಪೊಲೀಸರು ಸೂಚಿಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!