50 WORDS NEWS | ಮಸೀದಿಗೆ ನುಗ್ಗಿದ ಕಳ್ಳರು, ಹುಂಡಿ ಹಣ ಕದ್ದರು | ಕಸ ಗುಡಿಸುವಾಗ ಕಿರಿಕ್, ವಿಷ ಕುಡಿದ ಯುವತಿ

ಶಿವಮೊಗ್ಗ ಲೈವ್.ಕಾಂ | ಸಾಗರ / ಶಿಕಾರಿಪುರ | 15 ಸೆಪ್ಟೆಂಬರ್ 2018

ಮಸೀದಿಯಲ್ಲಿ ಕಳ್ಳತನ, ಹುಂಡಿ ಹಣ ನಾಪತ್ತೆ

ಮಸೀದಿಯೊಂದಕ್ಕೆ ನುಗ್ಗಿದ ಕಳ್ಳರು ಹುಂಡಿ ಹಣ ದೋಚಿ ಪರಾರಿಯಾಗಿದ್ದಾರೆ. ಸಾಗರದ ಬಿಲಾಲ್ ಮಸೀದಿಯಲ್ಲಿ ಶುಕ್ರವಾರ ಮಧ್ಯೆರಾತ್ರಿ ಘಟನೆ ನಡೆದಿದೆ. ಬೀರುವಿನಲ್ಲಿದ್ದ ಕಾಣಿಕೆ ಹಣವನ್ನು ಕಳ್ಳರು ದೋಚಿಸಿದ್ದಾರೆ. ಸುಮಾರು 15 ಸಾವಿರ ರೂ. ಹಣವಿತ್ತು ಅಂತಾ ಅಂದಾಜಿಸಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಸ ಗುಡಿಸುವಾಗ ಜಗಳ ವಿಷ ಕುಡಿದ ಯುವತಿ

ಮನೆ ಮುಂದೆ ಕಸ ಗುಡಿಸುವ ಸಂದರ್ಭ ಜಗಳವಾಗಿದ್ದು, ಯುವತಿಯೊಬ್ಬಳು ವಿಷ ಕುಡಿದಿದ್ದಾಳೆ. ಶಿಕಾರಿಪುರದ ಮುಡುಬ ಸಿದ್ಧಾಪುರದಲ್ಲಿ ಘಟನೆ ನಡೆದಿದೆ. ಕಾವ್ಯಾ (18) ವಿಷ ಕುಡಿದ ಯುವತಿ. ಕಸ ಗುಡಿಸುವಾಗ ಪಕ್ಕದ ಮನೆಯ ರಂಗಸ್ವಾಮಿ ಮತ್ತಿತರ ಎಂಟು ಜನರು ಕವ್ಯಾ ಜೊತೆ ಜಗಳವಾಡಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ಮನನೊಂದು ಕಾವ್ಯಾ ವಿಷ ಸೇವಿಸಿದ್ದಾಳೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!