ದಿಢೀರ್ ರದ್ದಾಯ್ತು ‘ದಿ ವಿಲನ್’ ಮಿಡ್ ನೈಟ್ ಶೋ, ಪ್ರದರ್ಶನ ಕ್ಯಾನ್ಸಲ್ ಆಗೋಕೆ ಇದ್ದಿದ್ದು ಒಂದೇ ಕಾರಣ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಅಕ್ಟೋಬರ್ 2018

ಬಹುನಿರೀಕ್ಷಿತ ದಿ ವಿಲನ್ ಸಿನಿಮಾಗೆ ನೀತಿ ಸಂಹಿತೆ ಬಿಸಿ ತಟ್ಟಿದೆ. ಇದರಿಂದ ಶಿವಮೊಗ್ಗದಲ್ಲಿ ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸುವಂತಾಯ್ತು.

ಲಕ್ಷ್ಮೀ ಟಾಕೀಸ್’ನಲ್ಲಿ ದಿ ವಿಲನ್ ಸಿನಿಮಾದ ಮಧ್ಯರಾತ್ರಿ ಶೋ ಏರ್ಪಡಿಸಲಾಗಿತ್ತು. ಟಿಕೆಟ್’ಗಳು ಸೋಲ್ಡ್ ಔಟ್ ಆಗಿದ್ದವು. ಸಂಜೆಯಿಂದಲೇ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಲಕ್ಷ್ಮೀ ಟಾಕೀಸ್ ಮುಂದೆ ಜಮಾಯಿಸಿದ್ದರು. ಡೊಳ್ಳು ಬಾರಿಸಿ, ಡಾನ್ಸ್ ಮಾಡುತ್ತ, ಶಿವರಾಜ್ ಕುಮಾರ್, ಸುದೀಪ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಕಟೌಟ್’ಗಳಿಗೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹೂವಿನ ಹಾರಗಳನ್ನು ಹಾಕಿ ಸಂಭ್ರಮಿಸಿದರು.

ಇನ್ನೇನು ಶೋ ಶುರುವಾಗಬೇಕಿತ್ತು

ರಾಜ್ಯದಲ್ಲೇ ಮೊದಲ ಶೋ ಇದಾಗಿತ್ತು. ಎಲ್ಲರಿಗಿಂತಲು ಮೊದಲೇ ದಿ ವಿಲನ್ ಚಿತ್ರ ಕಣ್ತುಂಬಿಕೊಳ್ಳಬೇಕು ಅಂತಾ ಅಭಿಮಾನಿಗಳು ಕಾತುರವಾಗಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ಚಿತ್ರಮಂದಿರದ ಮಾಲೀಕರು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ಅದರೆ ನೀತಿ ಸಂಹಿತೆ ಹಿನ್ನೆಲೆ ರಾತ್ರಿ ಹೊತ್ತು ಅವಕಾಶ ಕೊಡಲು ಸಾಧ್ಯವಿಲ್ಲ ಅಂತಾ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಇದರಿಂದ ಮಿಡ್ ನೈಟ್ ಶೋ ಕ್ಯಾನ್ಸಲ್ ಆಯ್ತು. ಬೆಳಗ್ಗೆ 6 ಗಂಟೆಗೆ ಮೊದಲ ಶೋ ಶುರುವಾಗಿದೆ.

ವಿಡಿಯೋ |

Leave a Reply

error: Content is protected !!