ಶಿವಮೊಗ್ಗದಲ್ಲಿ ವಾಜಪೇಯಿ 2 | ‘ಶಿವಮೊಗ್ಗದಿಂದ ನಾಲ್ಕು ಚಪಾತಿ, ಆಲು ಪಲ್ಯ ಪಾರ್ಸಲ್ ಕೊಂಡೊಯ್ದರು’

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಅಟಲ್ ಬಿಹಾರಿ ವಾಜಪೇಯಿ ಅವರು ಊಟ, ತಿಂಡಿಯಲ್ಲಿ ಕಟ್ಟುನಿಟ್ಟು. ಆದರೆ, ರುಚಿ ಅನಿಸಿದರೆ ಪಾರ್ಸೆಲ್ ಕಟ್ಟಿಸಿಕೊಂಡು ಹೋಗುತ್ತಿದ್ದರು..!

ಶಿವಮೊಗ್ಗಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾಗ, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮತ್ತು ಡಿ.ಹೆಚ್.ಸುಬ್ಬಣ್ಣ ಅವರೊಂದಿಗೆ ಶಿವಮೊಗ್ಗದಲ್ಲಿ ಗಣ್ಯರನ್ನು ಭೇಟಿಯಾಗಿ, ಮೀಟಿಂಗ್’ಗಳನ್ನು ಮಾಡಿದ್ದರು. ಡಿ.ಹೆಚ್.ಸುಬ್ಬಣ್ಣ ಅವರೊಂದಿಗೆ ಜೋಗ ಜಲಪಾತಕ್ಕೆ ಹೋಗಿ ಬಂದಿದ್ದರು.

‘ಚಪಾತಿ, ಪಲ್ಯ ಪಾರ್ಸೆಲ್ ಬೇಕಲ್ಲ..’

ಜೋಗದಿಂದ ಬಂದ ಬಳಿಕ, ಡಿ.ಹೆಚ್.ಸುಬ್ಬಣ್ಣ ಅವರ ಶಿವಮೊಗ್ಗದ ಮನೆಯಲ್ಲಿ, ವಾಜಪೇಯಿ ಅವರು ಉಳಿದುಕೊಂಡಿದ್ದರು. ಈ ವೇಳೆ, ಮನೆಯಲ್ಲಿ ಚಪಾತಿ ಮತ್ತು ಆಲುಗಡ್ಡೆ ಪಲ್ಯ ಮಾಡಿದ್ದರು. ರಾತ್ರಿ ಒಂದು ಚಪಾತಿ ಮತ್ತು ಆಲುಗಡ್ಡೆ ಸೇವಿಸಿದರು. ಮಲಗುವ ಮೊದಲು ಡಿ.ಹೆಚ್.ಸುಬ್ಬಣ್ಣ ಅವರ ಜೊತೆಗೆ ಮಾತನಾಡುತ್ತಾ, ಚಪಾತಿ, ಆಲುಗಡ್ಡೆ ಪಲ್ಯ ಪಾರ್ಸೆಲ್ ಕೊಡ್ತೀರಾ ಅಂತಾ ಕೇಳಿದರಂತೆ.

READ ALSO | ಶಿವಮೊಗ್ಗದಲ್ಲಿ ವಾಜಪೇಯಿ 1 | ‘ಜೋಗದ ಗುಂಡಿಗಿಳಿದು ಕವನ ಹೇಳಿದ್ದರು, ಮೇಲೆ ಬರುವಾಗ ಶರ್ಟು, ಪಂಚೆಯನ್ನೇ ಬಿಚ್ಚಿದ್ದರು’

‘ಮರುದಿನ ಬೆಳಗ್ಗೆ ವಾಜಪೇಯಿ ಅವರು ದೆಹಲಿಗೆ ಹೊರಡುವವರಿದ್ದರು. ಹರಿಹರದಿಂದ ರೈಲು ಹತ್ತಬೇಕಿತ್ತು. ರಾತ್ರಿ ಸೇವಿಸಿದ್ದ ಚಪಾತಿ, ಆಲುಗಡ್ಡೆ ಪಲ್ಯ ಅವರಿಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ನಾಲ್ಕು ಚಪಾತಿ, ಆಲುಗಡ್ಡೆ ಪಲ್ಯ ಪಾರ್ಸೆಲ್ ಬೇಕು ಅಂತಾ ಕೇಳಿದರು. ಬೆಳಗ್ಗೆ ಟ್ರೈನ್’ಗೆ ಬಿಡಲು ನಾನೇ ಹರಿಹರಕ್ಕೆ ತೆರಳಿದ್ದೆ. ಆಗ ಚಪಾತಿ, ಆಲುಗಡ್ಡೆ ಪಲ್ಯ ಪಾರ್ಸೆಲ್ ಮಾಡಿ ಕಳುಹಿಸಿದೆವು’ ಅಂತಾ ನೆನಪು ಮಾಡಿಕೊಳ್ಳುತ್ತಾರೆ ಡಿ.ಹೆಚ್.ಸುಬ್ಬಣ್ಣ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!