ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಕ್ಲಾಸ್, ವಾರದಲ್ಲಿ ಮೂರು ದಿನ ಪಾಠ ಮಾಡ್ತಾರೆ ಶಿವಮೊಗ್ಗ ಪೊಲೀಸ್

ಶಿವಮೊಗ್ಗ : ರೂಲ್ಸ್​ ಇದ್ದರೂ ಹೆಲ್ಮೆಟ್​ ಹಾಕದೆ ಬೈಕ್ ಓಡಿಸುತ್ತಿದ್ದವರಿಗೆ, ಶಿವಮೊಗ್ಗ ಪೊಲೀಸರು ತಕ್ಕ ‘ಪಾಠ’ ಕಲಿಸುತ್ತಿದ್ದಾರೆ. ಫೈನ್ ಹಾಕುವುದರ ಜೊತೆಗೆ, ಗಂಟೆಗಟ್ಟಲೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಮೊದಲ ದಿನ ಮೂವತ್ತಕ್ಕೂ ಹೆಚ್ಚು ಜನರಿಗೆ ತಿಳಿ ಹೇಳಿದ್ದಾರೆ.

ಕಡ್ಡಾಯಗೊಳಿಸಿದ್ದರೂ ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಿದ್ದವರನ್ನು ಪತ್ತೆ ಹಚ್ಚಿ, ಶಿವಮೊಗ್ಗ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಆದರೂ ಕೆಲವರು ಜಾಗೃತರಾಗಿಲ್ಲ. ಹೆಲ್ಮೆಟ್ ಹಾಕುತ್ತಿಲ್ಲ. ಇದೇ ಕಾರಣಕ್ಕೆ, ಶಿವಮೊಗ್ಗ ಜಿಲ್ಲಾ ಪೊಲೀಸರು, ಹೊಸ ಹಾದಿ ಹಿಡಿದಿದ್ದಾರೆ. ಅದುವೇ ಹೆಲ್ಮೆಟ್ ತೊಡದವರಿಗೆ ಪಾಠ ಕಲಿಸುವುದು.

ಮಂಗಳವಾರ ನಡೆದ ಮೊದಲ ಕೌನ್ಸಿಲಿಂಗ್​ನಲ್ಲಿ ಪಾಲ್ಗೊಂಡಿದ್ದವರು | ಕ್ಲಿಕ್ ಮಾಡಿ, ದೊಡ್ಡದಾಗಿ ನೋಡಿ

ಏನಿದು ‘ಕ್ಲಾಸ್​​’? ಇದರ ಪ್ರಯೋಜನವೇನು?

ಹೆಲ್ಮೆಟ್​ ಹಾಕದವರು ದಂಡ ಕಟ್ಟುವುದರ ಜೊತೆಗೆ ಕ್ಲಾಸ್​ಗೂ ಕೂರಬೇಕು. ವಾರದ ಮೂರು ದಿನ ಸಂಜೆ 5 ಗಂಟೆಯಿಂದ 6 ಗಂಟೆಯ ತನಕ, ಡಿಎಆರ್​​ ಹಾಲ್​ನಲ್ಲಿ ತರಗತಿ ನಡೆಯಲಿದೆ. ಅಲ್ಲಿ ಪೊಲೀಸರೇ ಪಾಠ ಮಾಡಲಿದ್ದಾರೆ. ಹೆಲ್ಮೆಟ್ ಹಾಕದಿದ್ದರೆ ಏನಾಗುತ್ತೆ ಅನ್ನುವುದರ ಕುರಿತು ವಿಡಿಯೋಗಳನ್ನು ತೋರಿಸಲಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿರುವವರನ್ನು ಹಿಡಿದು, ಡಿಎಲ್​ ಪಡೆಯುತ್ತೇವೆ. ಫೈನ್​ ಕಟ್ಟಿ, ಕೌನ್ಸಿಲಿಂಗ್​ನಲ್ಲಿ ಪಾಲ್ಗೊಂಡರೆ ಮಾತ್ರ ಡಿಎಲ್​ ಕೊಡುತ್ತೇವೆ. ಸುಪ್ರೀಂ ಕೋರ್ಟ್​ ಕೂಡ ಇದನ್ನು ಹೇಳಿದೆ.

ಅಭಿನವ್ ಖರೆ, ಜಿಲ್ಲಾ ರಕ್ಷಣಾಧಿಕಾರಿ

ಮಂಗಳವಾರ ಸಂಜೆ, ಮೊದಲ ಬ್ಯಾಚ್​ಗೆ ಪೊಲೀಸರು ಕೌನ್ಸಿಲಿಂಗ್ ಮಾಡಿದ್ದಾರೆ. ಮೂವತ್ತಕ್ಕೂ ಹೆಚ್ಚು ಮಂದಿ ಪಾಠ ಕೇಳಿದ್ದಾರೆ. ಗುರುವಾರ ಸಂಜೆ ಮತ್ತೊಂದು ಬ್ಯಾಚ್​​ಗೆ ಪೊಲೀಸರು ಪಾಠ ಮಾಡಲು ಅಣಿಯಾಗಿದ್ದಾರೆ. ಹೆಲ್ಮೆಟ್ ಹಾಕದೆ, ಪೊಲೀಸರ ಕೈಗೆ ಸಿಕ್ಕಿಬಿದ್ದವರು ತಪ್ಪದೇ ಕ್ಲಾಸ್​ಗೆ ಬರಲೇಬೇಕು. ಪೊಲೀಸರ ಪ್ರಯೋಗಕ್ಕೆ ಸಾರ್ವಜನಿಕ ವಲಯದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಇದೆ.

Leave a Reply

error: Content is protected !!