ಕೇಂದ್ರ ಸಚಿವೆಗೆ ಟ್ವೀಟ್ ಮಾಡಿದ್ದ ಶಿವಮೊಗ್ಗದ ಮಹಿಳೆಗೆ ಗುಡ್ ನ್ಯೂಸ್, ಎರಡೇ ದಿನದಲ್ಲಿ ಬಂತು ಪಾಸ್’ಪೋರ್ಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಪಾಸ್’ಪೋರ್ಟ್ ವಿತರಣೆ ವಿಳಂಬ, ಎರಡು ತಿಂಗಳ ಮಗುವಿನ ಪಾಸ್’ಪೋರ್ಟ್’ಗೆ ಪೊಲೀಸ್ ವೆರಿಫಿಕೇಷನ್ ಅಗತ್ಯತೆ ವಿರುದ್ಧ ಸಿಡಿದೆದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದ ಶಿವಮೊಗ್ಗದ ಮಹಿಳೆಗೆ, ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಟ್ವೀಟ್ ಮಾಡಿದ ಎರಡೇ ದಿನಕ್ಕೆ ಮಗುವಿನ ಪಾಸ್’ಪೋರ್ಟ್ ಮನೆಗೆ ಬಂದಿದೆ.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರೇ ಖುದ್ದು ಆಸ್ತೆ ವಹಿಸಿ, ಅಕ್ಷತಾ ಅವರ ಮಗುವಿಗೆ ಪಾಸ್’ಪೋರ್ಟ್ ಕೊಡಿಸಿದ್ದಾರೆ. ಹಾಗಾಗಿ ಅಕ್ಷತಾ ಫುಲ್ ಖುಷ್ ಆಗಿದ್ದಾರೆ. ಜರ್ಮನಿಗೆ ತೆರಳಲು ರೆಡಿಯಾಗಿದ್ದಾರೆ. ಈ ಮಧ್ಯೆ, ಶಿವಮೊಗ್ಗ ಲೈವ್.ಕಾಂ ಮೂಲಕ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಪಾಸ್’ಪೋರ್ಟ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದ ಮಹಿಳೆಯ ಟ್ವೀಟ್’ಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ, ಥಟ್ ಅಂತಾ ಕ್ಲಿಯರಾಯ್ತು ಸಮಸ್ಯೆ

‘ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಅಧಿಕಾರಿಗಳ ತಂಡ, ಕ್ಷಿಪ್ರವಾಗಿ ಕೆಲಸ ಮಾಡಿದರು. ಭಾನುವಾರ ಸಂಜೆ ರೀಜನಲ್ ಪಾಸ್’ಪೋರ್ಟ್ ಅಧಿಕಾರಿ ಖುದ್ದಾಗಿ ಕರೆ ಮಾಡಿದರು. ಸಮಸ್ಯೆಯನ್ನು ಬಗೆಹರಿಸಿದರು. ಭಾನುವಾರವೂ ಸಚಿವರು ಮತ್ತು ಅಧಿಕಾರಿಗಳು ಕೈಗೆ ಸಿಗುತ್ತಾರೆ ಅನ್ನುವುದೇ ಖುಷಿ. ಹಾಗೇ, ಇಷ್ಟು ಬೇಗೆ ಕೆಲಸ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ’ ಅಂತಾ ಅಕ್ಷತಾ ತಿಳಿಸಿದ್ದಾರೆ.

ಶಿವಮೊಗ್ಗದ ನಿವಾಸಿ ಅಕ್ಷತಾ ಅವರು, ಪತಿಯೊಂದಿಗೆ ಜರ್ಮನಿಯಲ್ಲಿ ನೆಲೆಸಿದ್ದಾರೆ. ಬಾಣಂತನಕ್ಕೆ ಶಿವಮೊಗ್ಗಕ್ಕೆ ಬಂದಿದ್ದ ಅಕ್ಷತಾ, ಈಗ ಎರಡು ತಿಂಗಳ ಮಗುವಿನೊಂದಿಗೆ ಜರ್ಮನಿಗೆ ತೆರಳಬೇಕಿದೆ. ಹಾಗಾಗಿ ಶಿವಮೊಗ್ಗ ಪಾಸ್’ಪೋರ್ಟ್ ಕಚೇರಿಯಲ್ಲಿ, ಮಗುವಿಗಾಗಿ ಪಾಸ್’ಪೋರ್ಟ್’ಗೆ ಅರ್ಜಿ ಸಿಲ್ಲಿಸಿದ್ದರು. ಒಂದೂವರೆ ತಿಂಗಳಾದರೂ ಪಾಸ್’ಪೋರ್ಟ್ ಕೈ ಸೇರದ ಹಿನ್ನೆಲೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಕುರಿತು ಶಿವಮೊಗ್ಗ ಲೈವ್.ಕಾಂ ಕೂಡ ವರದಿ ಮಾಡಿತ್ತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!