ತೀರ್ಥಹಳ್ಳಿ, ಹೊಸನಗರದಲ್ಲಿ ‘ಶಕೀಲಾ’ ಸಿನಿಮಾ ಶೂಟಿಂಗ್, ಶಕೀಲಾ ರೋಲ್’ನಲ್ಲಿ ಬಾಲಿವುಡ್ ಹೀರೋಯಿನ್

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ / ಹೊಸನಗರ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ, ಮಲೆಯಾಳಂನ ಚಿತ್ರ ನಟಿ ಶಕೀಲಾ ಜೀವನ ಕಥೆ ಆಧಾರಿತ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಬಾಲಿವುಡ್ ನಟಿಯೊಬ್ಬರು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್, ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಆರಂಭದಲ್ಲಿ ಬಹುಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ ಅಂತಾ ಹೇಳಲಾಗಿತ್ತು. ಅಂತಿಮವಾಗಿ ಶಕೀಲಾ ಸಿನಿಮಾ ಹಿಂದಿ ಭಾಷೆಯಲ್ಲಷ್ಟೇ ರೆಡಿಯಾಗಲಿದೆ. ಸದ್ಯ ಬಾಲಿವುಡ್’ನಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಶಕೀಲಾ ಸಿನಿಮಾ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚಿತ್ರೀಕರಣಗೊಳ್ಳುತ್ತಿದೆ.

ಎಲ್ಲೆಲ್ಲಿ ನಡೆಯುತ್ತಿದೆ ಶೂಟಿಂಗ್?

ಹೊಸನಗರದ ಚಕ್ರಾ ಡ್ಯಾಂನ ಮೇಲೆ, ಶಕಿಲಾ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಎರಡು ವಾರದಿಂದ ಚಿತ್ರೀಕರಣ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಆಗಾಗ ತೊಡಕಾಗುತ್ತಿದ್ದರೂ, ಶೂಟಿಂಗ್ ನಿರಂತರವಾಗಿದೆ. ಇನ್ನು, ತೀರ್ಥಹಳ್ಳಿ ತಾಲೂಕಿನ ಕೆಲವು ಕಡೆಯೂ ಶೂಟಿಂಗ್ ನಡೆದಿದೆ. ಇಲ್ಲಿಯ ಲೊಕೇಷನ್’ಗಳು ಕಥೆಗೆ ಚೆನ್ನಾಗಿ ಹೊಂದಿಕೆ ಆಗುವುದರಿಂದ, ಶಿವಮೊಗ್ಗದ ವಿವಿಧೆಡೆ ಶೂಟಿಂಗ್ ಮಾಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಾಲಿವುಡ್ ಹೀರೋಯಿನ್

ಶಕೀಲಾ ಸಿನಿಮಾದಲ್ಲಿ ಮಲೆಯಾಳಂ ನಟಿ ಶಕೀಲಾರ ಪತ್ರವನ್ನು, ಬಾಲಿವುಡ್’ನ ಸೆನ್ಸೇಷನಲ್ ನಟಿ ಅನಿಸಿಕೊಂಡಿರುವ, ರಿಚಾ ಚಡ್ಡಾ ಮಾಡುತ್ತಿದ್ದಾರೆ. ಸದ್ಯ ರಿಚಾ ಚೆಡ್ಡಾ ಶಿವಮೊಗ್ಗದ ವಿವಿಧೆಡೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ಒಂದಷ್ಟು ರೊಮಾಂಟಿಕ್ ಸೀನ್’ಗಳಿಗೆ, ಚಕ್ರಾ ಡ್ಯಾಂ ಸುತ್ತಮುತ್ತಲ ಲೊಕೇಷನ್ ಚೆನ್ನಾಗಿ ಸೂಟ್ ಆಗಲಿದೆ ಅಂತಾ, ಇಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ತೀರ್ಥಹಳ್ಳಿಯ ವಿವಿಧಡೆಯೂ ಚಿತ್ರೀಕರಣ ನಡೆಯುತ್ತಿದೆ.

ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಇಂದ್ರಜಿತ್ ಲಂಕೇಶ್

ಸ್ಯಾಂಡಲ್’ವುಡ್’ನ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್, ಬಾಲಿವುಡ್’ನ ಶಕೀಲಾ ಸಿನಿಮಾದ ಡೈರೆಕ್ಷನ್ ಮಾಡುತ್ತಿದ್ದಾರೆ. ಈಗಾಗಲೇ ಶಿವಮೊಗ್ಗದಲ್ಲಿ ಬಹುತೇಕ ಚಿತ್ರೀಕರಣ ಮುಗಿಸಿರುವ ಇಂದ್ರಜಿತ್ ಲಂಕೇಶ್, ‘ಚಿತ್ರೀಕರಣಕ್ಕೆ ಫಾರಿನ್’ಗೆ ಹೋಗ್ತಾರೆ. ಆದರೆ ಕರ್ನಾಟಕದಲ್ಲೇ ಒಳ್ಳೊಳ್ಳೆ ಲೊಕೇಷನ್’ಗಳಿವೆ. ಚಕ್ರಾ ಡ್ಯಾಂ ಸ್ವಿಸ್’ಗಿಂತಲೂ ಕಡಿಮೆಯೇನಿಲ್ಲ’ ಅಂತಾರೆ. ಇನ್ನು, ಶಕೀಲಾ ಚಿತ್ರೀಕರಣದ ಕುರಿತು ಕೇಳಿದೆ ಪ್ರಶ್ನೆಗೆ, ‘ಸಿನಿಮಾದಲ್ಲಿ ಇಬ್ಬರು ಹೀರೋಯಿನ್’ಗಳಿದ್ದಾರೆ. ಮಲಯಾಳಂನ ಹೀರೋ ಇದ್ದಾರೆ. ನಾಯಕಿಯ ಸುತ್ತಲೂ ಕಥೆ ಸುತ್ತುತ್ತದೆ’ ಅಂತಾ ತಿಳಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!