ಬೃಹತ್ ಹೆಬ್ಬಾವು ಸೆರೆ ಹಿಡಿದ ಸ್ನೇಕ್ ಕಿರಣ್, ಹೇಗಿತ್ತು ಗೊತ್ತಾ ಆಪರೇಷನ್?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಜಮೀನೊಂದರಲ್ಲಿ ಇದ್ದ ಬೃಹತ್ ಹೆಬ್ಬಾವನ್ನು ಸ್ನೇಕ್ ಕಿರಣ್ ಸೆರೆ ಹಿಡಿದಿದ್ದಾರೆ. ಶಿವಮೊಗ್ಗದ ಹಾಯ್’ಹೊಳೆ ಗ್ರಾಮದಲ್ಲಿ ಘಟನೆ ನಡೆದಿದೆ.

ತಮ್ಮ ಜಮೀನಿನಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ ಅಂತಾ, ಓಂಕಾರಪ್ಪ ಎಂಬುವವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಹೆಬ್ಬಾವು ಹಿಡಿದರು. ಹೆಬ್ಬಾವು ಸೆರೆ ಹಿಡಿಯುವ ಸಂದರ್ಭ, ಸ್ನೇಕ್ ಕಿರಣ್ ಅವರ ಮೇಲೆಯೇ ಹಾವು ದಾಳಿ ಮಾಡಲು ಮುಂದಾಯಿತು. ಇದನ್ನು ಕಂಡು ಸುತ್ತಲು ನೆರೆದಿದ್ದವರು ಹೌಹಾರಿದರು. ಕೊನೆಗೆ ಹರಸಾಹಸ ಮಾಡಿ, ಸ್ನೇಕ್ ಕಿರಿಣ್ ಹೆಬ್ಬಾವನ್ನು ಸೆರೆ ಹಿಡಿದರು.

ಸ್ನೇಕ್ ಕಿರಣ್ ಹೆಬ್ಬಾವು ಸೆರೆ ಹಿಡಿದಿದ್ದರಿಂದ ಸ್ಥಳೀಯರ ಆತಂಕ ದೂರಾಗಿದೆ. ಇನ್ನು, ಹಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಿ, ಕಾಡಿಗೆ ಬಿಡಲಾಗಿದೆ.

ಬೃಹತ್ ಹೆಬ್ಬಾವು ಸೆರೆ ಹಿಡಿದ ಸ್ನೇಕ್ ಕಿರಣ್, ಹೇಗಿತ್ತು ಗೊತ್ತಾ ಆಪರೇಷನ್?

ಬೃಹತ್ ಹೆಬ್ಬಾವು ಸೆರೆ ಹಿಡಿದ ಸ್ನೇಕ್ ಕಿರಣ್, ಹೇಗಿತ್ತು ಗೊತ್ತಾ ಆಪರೇಷನ್?

Posted by Shivamogga Live on Friday, 1 June 2018

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 74011700200

Leave a Reply

error: Content is protected !!